Karnataka Times
Trending Stories, Viral News, Gossips & Everything in Kannada

BCCI: ಇನ್ಮೇಲೆ ದೇಶದ ಯಾವುದೇ ವ್ಯಕ್ತಿ IPL ಆಡಲು ಬರಲಿದೆ ಹೊಸ ರೂಲ್ಸ್! BCCI ನಿರ್ಧಾರ

advertisement

ಇತ್ತೀಚಿಗೆ ನಿಮಗೆಲ್ಲರಿಗೂ ತಿಳಿದಿರಬಹುದು ಭಾರತ ಕ್ರಿಕೆಟ್ ತಂಡದ ಪ್ರಮುಖ ಕಾಂಟ್ರಾಕ್ಟ್ ನಿಂದ ಇಶಾನ್ ಕಿಶನ್ (IPL Auction) ಹಾಗೂ ಶ್ರೇಯಸ್ ಅಯ್ಯರ್ (Shreyas Iyer) ಅವರನ್ನು ಕೈ ಬಿಡಲಾಗಿತ್ತು. ಇಬ್ಬರೂ ಕೂಡ ಪ್ರಮುಖವಾಗಿ ಐಪಿಎಲ್ ಕಾಂಟ್ರಾಕ್ಟ್ ನ ಮುಖ್ಯವಾಗಿ ಪರಿಗಣನೆಗೆ ತೆಗೆದುಕೊಂಡು ರಣಜಿ ಕ್ರಿಕೆಟ್ ಆಡದೆ ಇದ್ದ ಕಾರಣದಿಂದಾಗಿ ಬಿಸಿಸಿಐ (BCCI) ನಿರ್ಧಾರವನ್ನು ಕೈ ತೆಗೆದುಕೊಂಡಿತ್ತು.

ಹೀಗಾಗಿ ಐಪಿಎಲ್ (IPL) ಆಡುವಂತಹ ಆಟಗಾರರ ವಿಚಾರದಲ್ಲಿ ಈಗ ಬಿಸಿಸಿಐ ಮತ್ತೊಂದು ಪ್ರಮುಖವಾದ ನಿರ್ಧಾರವನ್ನು ಕೈ ತೆಗೆದುಕೊಳ್ಳುವಂತಹ ಸಾಧ್ಯತೆ ಹೆಚ್ಚಾಗಿದೆ. ಹಾಗಿದ್ರೆ ಆ ನಿಯಮ ಏನಿರಬಹುದು ಅನ್ನೋದನ್ನ ತಿಳಿಯೋಣ ಬನ್ನಿ.

ಐಪಿಎಲ್ ಆಡಬೇಕು ಅಂದ್ರೆ ಇದು ಕಡ್ಡಾಯ:

ಇಶಾನ್ ಕಿಶನ್ (Ishan Kishan) ರವರು ಅಗತ್ಯವಾಗಿ ತಮ್ಮ ಜಾರ್ಖಂಡ್ ರಾಜ್ಯ ಕ್ರಿಕೆಟ್ ತಂಡದ ಪರವಾಗಿ ಡೊಮೆಸ್ಟಿಕ್ ಕ್ರಿಕೆಟ್ ಆಡಬೇಕಾಗಿತ್ತು. ಆ ಸಂದರ್ಭದಲ್ಲಿ ಅವರ ತಂಡ ಪಾಯಿಂಟ್ಸ್ ಟೇಬಲ್ ನಲ್ಲಿ ಕೆಳಗೆ ಇದ್ದರೂ ಕೂಡ ಇಶಾನ್ ಕಿಶನ್ ತಮ್ಮ ಮುಂಬೈ ತಂಡದ ಐಪಿಎಲ್ (IPL) ಗಾಗಿ ತಯಾರಿ ಮಾಡಿಕೊಳ್ಳುತ್ತಾ ತಮ್ಮ ಗಮನವನ್ನು ವಹಿಸಿದ್ದರು. ಇದನ್ನು ನೋಡಿ ಉಳಿದ ಯುವ ಆಟಗಾರರು ಕೂಡ ಐಪಿಎಲ್ ಆಡುವುದಕ್ಕಾಗಿ ತಮ್ಮ ಸಂಪೂರ್ಣ ತಯಾರಿಯನ್ನು ನಡೆಸಿಕೊಳ್ಳಬೇಕು ಎನ್ನುವಂತಹ ಸಂದೇಶವನ್ನು ಬೀರಬಾರದು ಎನ್ನುವ ಕಾರಣಕ್ಕಾಗಿ ಬಿಸಿಸಿಐ ಹೊಸ ನಿಯಮಗಳನ್ನು ಯುವ ಆಟಗಾರರ ಮೇಲೆ ಹೇರುವಂತಹ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ.

 

advertisement

Image Source: IndiaToday

 

ಇದೇ ಕಾರಣಕ್ಕಾಗಿ ಕ್ರಿಕೆಟ್ ಸಂಸ್ಥೆಯ ಹಿರಿಯ ಸಲಹೆಗಾರರು ಹೇಳಿರುವ ಪ್ರಕಾರ ಪ್ರತಿಯೊಬ್ಬ ಯುವ ಕ್ರಿಕೆಟಿಗರು ಕೂಡ ಕನಿಷ್ಠಪಕ್ಷ ಮೂರರಿಂದ ನಾಲ್ಕು ರಣಜಿ ಪಂದ್ಯಗಳನ್ನು ರಾಜ್ಯಕ್ಕಾಗಿ ಆಡಿದರೆ ಮಾತ್ರ ಅವರಿಗೆ ಐಪಿಎಲ್ ನಲ್ಲಿ ಆಡುವಂತಹ ಅಥವಾ ಐಪಿಎಲ್ ಹರಾಜು (IPL Auction) ಪ್ರಕ್ರಿಯೆಯಲ್ಲಿ ತಮ್ಮನ್ನು ತಾವು ರಿಜಿಸ್ಟರ್ ಮಾಡಿಕೊಳ್ಳುವಂತಹ ಅವಕಾಶವನ್ನು ನೀಡೋದಕ್ಕೆ ಮಾನದಂಡವನ್ನಾಗಿ ಆಯ್ಕೆ ಮಾಡಬೇಕೆಂಬುದಾಗಿ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಫಿಟ್ ಆಗಿದ್ದರೂ ಕೂಡ ರಣಜಿ ಪಂದ್ಯಗಳನ್ನು ಆಟವಾಡೋದಕ್ಕೆ ಕೆಲವು ಕ್ರಿಕೆಟಿಗರು ಹಿಂಜರಿಯುತ್ತಿರುವುದು ನಿಜಕ್ಕೂ ಕೂಡ ಬೇಸರದ ವಿಚಾರವಾಗಿದೆ ಎಂದು ಹೇಳಬಹುದಾಗಿದೆ. ಕೆಲವು ಆಟಗಾರರು ರೆಡ್ಬಾಲ್ ಕ್ರಿಕೆಟ್ ಅನ್ನು ಆಡೋದಕ್ಕೆ ಸಾಧ್ಯವಾಗದೇ ಇರಬಹುದು ಹಾಗೂ ಅವರಿಗೆ ವಹಿಸಿರುವಂತಹ ಕ್ರಿಕೆಟ್ ಜವಾಬ್ದಾರಿಯ ಕಾರಣದಿಂದಾಗಿ ಅವರು ಹಿಂಜರಿಯಬಹುದು ಆದರೆ ಕೆಲವೊಂದು ಯುವ ಕ್ರಿಕೆಟಿಗರು ಇದನ್ನ ನಿರ್ಲಕ್ಷಿಸುತ್ತಿರುವುದು ನಿಜಕ್ಕೂ ಕೂಡ ಸರಿಯಲ್ಲ ಅನ್ನೋದಾಗಿ ಅವರು ಹೇಳಿದ್ದಾರೆ.

ಇಶಾನ್ ಕಿಶನ್ ರವರು ಬಿಸಿಸಿಐನ ಸೆಂಟ್ರಲ್ ಕಾಂಟ್ರಾಕ್ಟ್ ನಿಂದ ಹೊರಗೆ ಹೋಗಿರುವುದಕ್ಕೆ ಕೂಡ ಇದೇ ಕಾರಣ ಎಂಬುದಾಗಿ ಕೂಡ ತಿಳಿದುಬರುತ್ತದೆ ಯಾವುದೇ ರೀತಿಯ ಅಧಿಕೃತ ಸ್ಟೇಟ್ಮೆಂಟ್ ಅನ್ನು ಹೊರ ನೀಡಿಲ್ಲ.

advertisement

Leave A Reply

Your email address will not be published.