Karnataka Times
Trending Stories, Viral News, Gossips & Everything in Kannada

Hybrid Car: ಇನೋವಾಗಿಂತ ಕಡಿಮೆ ಬೆಲೆಗೆ ಬಂತು ಹೈಬ್ರಿಡ್ ಕಾರು! ಬೆಂಕಿ ಲುಕ್

advertisement

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಆಟೋಮೊಬೈಲ್ ಇಂಡಸ್ಟ್ರಿಯ ಕಾರಣದಿಂದಾಗಿ ವಿದೇಶ ಕಂಪನಿಗಳು ಕೂಡ ತಮ್ಮ ಕಾರುಗಳನ್ನು ಭಾರತಕ್ಕೆ ತರಲು ಯೋಜನೆ ಹಾಕುತ್ತಿದ್ದಾರೆ. ಅವುಗಳಲ್ಲಿ ಇವತ್ತು ನಾವು ಮಾತನಾಡಲು ಹೊರಟಿರೋದು Mitsubishi ಕಂಪನಿಯ ಒಂದು ಹೊಸ ಕಾರಿನ ಬಗ್ಗೆ.

ಈಗಾಗಲೇ Mitsubishi ತನ್ನ ಪಜೇರೋ ಸ್ಪೋರ್ಟ್ ಕಾರ್ ಅನ್ನು ಅತಿ ಶೀಘ್ರದಲ್ಲಿ ಭಾರತದಲ್ಲಿ ಮತ್ತೊಮ್ಮೆ ಲಾಂಚ್ ಮಾಡೋದಕ್ಕೆ ಸಿದ್ದವಾಗಿ ನಿಂತಿದೆ. ಆದರೆ ಈಗ ನಾವು ಮಾತನಾಡಲು ಹೊರಟಿರೋದು Mitsubishi Xpander Cross ಕಾರಿನ ಬಗ್ಗೆ. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

Mitsubishi Xpander Cross:

 

Image Source: Carscoops

 

Mitsubishi Xpander Cross ಕಾರು ಸಧ್ಯಕ್ಕೆ ಹೈಬ್ರಿಡ್ ವರ್ಷನ್ ನಲ್ಲಿ ವಿದೇಶದಲ್ಲಿ ಲಾಂಚ್ ಆಗಿದೆ. ಕಾರಿನ ಲುಕ್ ಬಗ್ಗೆ ಮಾತನಾಡೋದಾದ್ರೆ ಪಕ್ಕಾ ಸ್ಪೋರ್ಟ್ಸ್ ಲುಕ್ ನಲ್ಲಿ ಕಾಣಿಸುತ್ತದೆ. ಹೈಡ್ರಾಲಿಕ್ ಟೇಲ್ಗೇಟ್ ಓಪನಿಂಗ್ ಅನ್ನು ನೀಡಲಾಗಿದೆ. ಏಳು ಸೀಟರ್ಗಳ ಉತ್ತಮ ಸೀಟಿಂಗ್ ವ್ಯವಸ್ಥೆಯನ್ನು ಕೂಡ ನೀವು ಈ ಕಾರ್ಯದಲ್ಲಿ ಕಾಣಬಹುದಾಗಿದೆ. ಮೇಲ್ಭಾಗದಲ್ಲಿ ಎಸಿ ವೆಂಟ್ಸ್ ಗಳನ್ನು ನೀಡಲಾಗಿದೆ. ಸೀಟ್ ಅಡ್ಜೆಸ್ಟ್ಮೆಂಟ್ ಅನ್ನು ಮ್ಯಾನುವಲ್ ಆಗಿ ನೀಡಲಾಗಿದೆ. Mitsubishi Xpander Cross ಕಾರಿನಲ್ಲಿ ಕ್ರೂಸ್ ಕಂಟ್ರೋಲ್ ಅನುಕೂಲ ನೀವು ಪಡೆದುಕೊಳ್ಳಬಹುದಾಗಿದ್ದು ಏಳು ಇಂಚುಗಳ ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ಅನ್ನು ಕೂಡ ನೀಡಲಾಗಿದೆ.

advertisement

Mitsubishi Xpander Cross ಕಾರಿನಲ್ಲಿ ವಾಯ್ಸ್ ಕಮಾಂಡ್ ಫೀಚರ್ ಜೊತೆಗೆ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ವಯರ್ಲೆಸ್ ಆಗಿ ಕಾರ್ಯನಿರ್ವಹಿಸುವುದಕ್ಕೆ 9 ಇಂಚುಗಳ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಕೂಡ ಒದಗಿಸಲಾಗಿದೆ. ಎಲೆಕ್ಟ್ರಾನಿಕ್ ಬ್ರೇಕಿಂಗ್ ಜೊತೆಗೆ ಯು ಎಸ್ ಬಿ ಪೋರ್ಟ್ ಅನ್ನು ಕೂಡ ನೀಡಲಾಗಿದೆ.

 

Image Source: Gaadiwaadi.com

 

ಒಳಗಿನ ವಿನ್ಯಾಸವನ್ನು ನೀವು ನೋಡುವುದಾದರೆ 90% ಪ್ಲಾಸ್ಟಿಕ್ ಅನ್ನು ಬಳಕೆ ಮಾಡಲಾಗಿದೆ. ಹೊರ ವಿನ್ಯಾಸದಲ್ಲಿ ಕೂಡ ಕಾರಣ ಸಂಪೂರ್ಣವಾಗಿ ಸ್ಟೈಲಿಶ್ ಲುಕ್ ಅದರಲ್ಲೂ ವಿಶೇಷವಾಗಿ ಸ್ಪೋರ್ಟಿ ಲುಕ್ ನಲ್ಲಿ ತರಲಾಗುತ್ತಿದೆ. ನೋಡಿದ್ರೆ ಖಂಡಿತವಾಗಿ ಡಿಫೆಂಡೆರ್ ಕಾರನ್ನು ನೆನಪಿಸಿಕೊಳ್ಳುವ ರೀತಿಯಲ್ಲಿ ಡಿಸೈನ್ ಮಾಡಲಾಗಿದೆ.

Mitsubishi Xpander Cross Mileage and Price:

ಕಾರಿನಲ್ಲಿ ಸುರಕ್ಷತಾ ಕ್ರಮಗಳ ರೂಪದಲ್ಲಿ ಎರಡು ಏರ್ ಬ್ಯಾಗ್ ಗಳು ಹಾಗೂ ನಾಲ್ಕು ಸ್ಟಾರ್ ಸೇಫ್ಟಿ ರೇಟಿಂಗ್ ಕೂಡ ನೀಡಲಾಗಿದೆ. ADAS, ABS, EBD, ಕೊಲಿಷನ್ ಕಂಟ್ರೋಲ್ ಅನ್ನು ಕೂಡ ನೀವು ಸೇಫ್ಟಿ ರೂಪದಲ್ಲಿ ಈ ಕಾರಿನಲ್ಲಿ ಕಾಣಬಹುದಾಗಿದೆ. 45 ಲೀಟರ್ ಗಳ ಫ್ಯೂಲ್ ಟ್ಯಾಂಕ್ ಅನ್ನು ನೀವು ಇದರಲ್ಲಿ ಕಾಣಬಹುದಾಗಿದ್ದು ಈ ಕಾರು ನಿಮಗೆ 23 ಕಿ.ಮೀ ಪ್ರತಿ ಲೀಟರ್ ಮೈಲೇಜ್ ಅನ್ನು ನೀಡುತ್ತದೆ.

ಇನ್ನು ಇದು ಎರಡರಿಂದ ಮೂರು ವರ್ಷಗಳ ಒಳಗಾಗಿ ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಆಗುವ ಸಾಧ್ಯತೆ ಇದು ಇದರ ನಿರೀಕ್ಷಿತ ಬೆಲೆ 18 ರಿಂದ 21 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಆಗಿರಬಹುದಾಗಿದೆ ಎಂಬುದಾಗಿ ಲೆಕ್ಕಾಚಾರ ಇದ್ದು ಭಾರತಕ್ಕೆ ಇದು ಲಾಂಚ್ ಆದ ಮೇಲೆನೇ ನೋಡಬೇಕಾಗಿದೆ.

advertisement

Leave A Reply

Your email address will not be published.