Karnataka Times
Trending Stories, Viral News, Gossips & Everything in Kannada

KSRTC ಯ ಬಸ್ ಕಂಡೆಕ್ಟರ್, ಡ್ರೈವರ್ ಹಾಗೂ ಎಲ್ಲಾ ಸಿಬ್ಬಂದಿಗಳಿಗೆ ಸರ್ಕಾರದ ಹೊಸ ಆದೇಶ!

advertisement

ಕರ್ನಾಟಕ ರಾಜ್ಯದ ಸರಕಾರಿ ಬಸ್ ಗಳು ಇತ್ತೀಚೆಗಂತು ಜಗತ್ ಪ್ರಸಿದ್ಧವಾಗುತ್ತಿದೆ. ರಾಜ್ಯದ ಸಾರಿಗೆ ವ್ಯವಸ್ಥೆಯು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುತ್ತಿದ್ದು ಸರಕಾರಿ ಬಸ್ ಗಳಿಗೆ ಜನರಿಂದ ಬರುವ ಬೇಡಿಕೆ ಕೂಡ ಅಧಿಕವಾಗುತ್ತಿದೆ. ಸರಕಾರಿ ಬಸ್ ನಲ್ಲಿ ಜನರಿಗೆ ಓಡಾಟ ಎನ್ನುವುದು ಸುಲಭ ಮತ್ತು ಖಾಸಗಿ ಬಸ್ ಸಂಚಾರಕ್ಕೆ ಹೋಲಿಸಿದರೆ ಸರಕಾರಿ ಬಸ್ ಗೆ ಕಡಿಮೆ ದರ ಇರುವುದನ್ನು ನಾವು ಕಾಣಬಹುದು. ಅದೇ ರೀತಿ ಸರಕಾರಿ ಬಸ್ ನಲ್ಲಿ ಅನೇಕ ಸಮಸ್ಯೆ ಕೂಡ ಇದ್ದು, ಎಲ್ಲ ಸಮಸ್ಯೆಗಳಿಗೆ ಇದೀಗ ಪರಿಹಾರದ ಕಾಲ ಕೂಡ ಸನ್ನಿಹಿತವಾಗಿದೆ.

ಯಶಸ್ವಿ ಶಕ್ತಿ ಯೋಜನೆ

ಸರಕಾರದ ಶಕ್ತಿ ಯೋಜನೆ (Shakti Yojane) ಯು ರಾಜ್ಯದಲ್ಲಿ ದೊಡ್ಡ ಮಟ್ಟಿಗೆ ಯಶಸ್ಸು ಕಂಡಿದೆ ಎಂದು ಹೇಳಬಹುದು. ಶಕ್ತಿ ಯೋಜನೆಯ ಬಳಿಕ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು ಇದರಿಂದಾಗಿ ಬಸ್ ಸದಾ ತುಂಬಿಕೊಂಡೆ ಪ್ರಯಾಣ ಸಾಗಿಸುತ್ತಿದೆ. ಕೆಲವೆಡೆ ಬಸ್ ನಲ್ಲಿ ನೂಕು ನುಗ್ಗಲು ಏರ್ಪಟ್ಟಿದ್ದು ಅನೇಕ ಕಡೆ ಜಗಳ ಆಗಿರುವುದನ್ನು ಕಾಣಬಹುದು. ಈ ನಡುವೆ ಸರಕಾರಿ ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಪ್ರಯಾಣವಾದ ಕಾರಣ ಎಲ್ಲರೂ ಖುಷಿಯಿಂದಲೆ ಪ್ರಯಾಣಿಸುತ್ತಿದ್ದು ಈ ಶಕ್ತಿ ಯೋಜನೆ ಬಹುಪಾಲು ಯಶಸ್ವಿಯಾಗಿದೆ.

KSRTC Bus Karnataka
Image Source: Abhibus

ಅನೇಕ ಸಮಸ್ಯೆ

advertisement

ಶಕ್ತಿ ಯೋಜನೆ ಎನ್ನುವುದು ರಾಜ್ಯದ ಜನತೆಗೆ ವರದಾನ ಆದರೂ ಸಾರಿಗೆ ಇಲಾಖೆ ನೌಕರರಿಗೆ ಹೆಚ್ಚುವರಿ ಹೊರೆಯಾಗುತ್ತಿದೆ. ಬಸ್ ರಶ್ ಆದ ಕಾರಣ ಹೆಚ್ಚುವರಿ ಟ್ರಿಪ್ ಹಾಗೂ ರಜಾ ಅವಧಿಯಲ್ಲಿಯೂ ಕೆಲಸ ಮಾಡುವ ಪರಿಸ್ಥಿತಿ ಎದುರಾಗಿದೆ. ಈ ನಡುವೆ ಹಳೆ ಬಾಕಿ ಇರುವ ವೇತನ ಕೂಡ ಇನ್ನು ಕೂಡ ಬಂದಿಲ್ಲ. ನೌಕರರ ಹಳೆ ಬಾಕಿ, ಪಿಂಚಣಿ ಮೊತ್ತ ಕೂಡ ಬರಲು ಬಾಕಿ ಇದೆ. ಅಷ್ಟು ಮಾತ್ರವಲ್ಲದೆ ಉಪಧನದ ಬಾಕಿ ಮೊತ್ತ, ತುಟ್ಟಿ ಭತ್ಯೆ, ರಜೆ ದಿನ ಕೆಲಸಮಾಡಿದ್ದ ವೇತನ ಬಾಕಿ ಹೀಗೆ ಅನೇಕ ಸಮಸ್ಯೆ ಇರುವುದನ್ನು ಕಾಣಬಹುದು. ಈಗ ಎಲ್ಲ ಸಮಸ್ಯೆ ಪರಿಹಾರವಾಗಲಿದೆ.

ಶುಭ ಸುದ್ದಿ

ರಾಜ್ಯ ಸರಕಾರದಿಂದ KSRTC ಸಿಬ್ಬಂದಿಗೆ ರಜೆ ದಿನದ ಕೆಲಸದ ನಗದೀಕರಣ, ಉಪಧನದ ಬಾಕಿ ಮೊತ್ತ, ತುಟ್ಟಿ ಭತ್ಯೆ ಹಿಂಬಾಕಿ ಸೇರಿದಂತೆ ಸಾರಿಗೆ ಇಲಾಖೆಯಿಂದ ನೀಡಬೇಕಾದ ಅಷ್ಟು ಹಳೆ ಬಾಕಿ ಮೊತ್ತ ಪೂರ್ತಿ ನೀಡಲು ಸರಕಾರ ನಿರ್ಣಯಿಸಿದ್ದು ಈ ಮೂಲಕ ಅನೇಕ ಸಾರಿಗೆ ಇಲಾಖೆ ಸಿಬ್ಬಂದಿಗೆ ಈ ವಿಚಾರ ದೊಡ್ಡ ಮಟ್ಟಿಗೆ ಕೊಡುಗೆ ನೀಡಿದಂತಾಗಿದೆ. ಯಾವ ಯಾವ ಬಾಕಿಗೆ ಇಂತಿಷ್ಟು ಹಣ ಎಂದು ಬಿಡುಗಡೆ ಮಾಡುತ್ತಿದ್ದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ (Ramalinga Reddy)ಅವರು ಮಾತನಾಡಿದ್ದಾರೆ.

Image Source: Vijay Karnataka

ಎಷ್ಟು ಬಾಕಿ ಮೊತ್ತ ಇದೆ

2022-23ನೇ ಸಾಲಿನ ರಜೆ ಅವಧಿಯ ಕೆಲಸಕ್ಕೆ ಪಡೆಯುವ ನಗದೀಕರಣ ಯೋಜನೆಯ 24ಕೋಟಿ ರೂಪಾಯಿ, ಜುಲೈ ನಿಂದ ಅಕ್ಟೋಬರ್ ವರೆಗಿನ ನಾಲ್ಕು ತಿಂಗಳ ತುಟ್ಟಿ ಭತ್ಯೆ 54ಕೋಟಿ ರೂಪಾಯಿ ಹಾಗೂ 2024 ರಲ್ಲಿ ನಿವೃತ್ತರಾದವರಿಗೆ ನೀಡಲಾಗುವ ಉಪಧನದ 6 ಕೋಟಿ ರೂಪಾಯಿ ಎಲ್ಲ ಸೇರಿ 84ಕೋಟಿ ರೂಪಾಯಿ ಮೊತ್ತ ಬಿಡುಗಡೆ ಮಾಡಲು ಆದೇಶ ನೀಡಲಾಗಿದೆ. ಸ್ವತಃ ಸಚಿವ ರಾಮಲಿಂಗ ರೆಡ್ಡಿ ಅವರು ಈ ಆದೇಶ ಹೊರಡಿಸಿದ್ದು ರಾಜ್ಯದ ಜನತೆಗೆ ಈ ವಿಚಾರ ಬಹಳ ಖುಷಿ ತರಿಸಿದೆ.

advertisement

Leave A Reply

Your email address will not be published.