Karnataka Times
Trending Stories, Viral News, Gossips & Everything in Kannada

Renault Bigster: ಎರ್ಟಿಗಾ ಕಾರನ್ನು ಮೀರಿಸಲು ರಗಡ್ ಲುಕ್ ಜೊತೆ ಮತ್ತೆ ಬರುತ್ತಿದೆ ಈ ಕಾರು! ಬೆಲೆ ಕೂಡ ಕಡಿಮೆ

advertisement

ಫ್ರೆಂಚ್ ಕಾರು ಉತ್ಪಾದನಾ ಕಂಪನಿಯಾಗಿರುವ ರೆನಾಲ್ಟ್ (Renault) ತನ್ನ ಮೂರನೇ ತಲೆಮಾರಿನ ಡಸ್ಟರ್ (Duster) ಎಸ್ ಯುವಿಯನ್ನು ಜಾಗತಿಕ ಮಾರುಕಟ್ಟೆಗಾಗಿ ಪರಿಚಯಿಸಲು ಸಿದ್ದವಾಗುತ್ತಿದ್ದು, ಅದು Ertiga ಕಾರಿಗೆ ಟಕ್ಕರ್ ಕೊಡೋದು ಗ್ಯಾರಂಟಿ ಎನ್ನುತ್ತಿದ್ದಾರೆ ಕಾರ್ ಪ್ರೀಯರು. ಹೊಸ ಡಸ್ಟರ್ ಮಾದರಿಯನ್ನು ಮೊದಲು ಡಾಸಿಯಾ ಕಂಪನಿಯು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡಲಿದ್ದು, ತದನಂತರವಷ್ಟೇ ರೆನಾಲ್ಟ್ ಕಂಪನಿಯು ಹೊಸ ಡಸ್ಟರ್ ಬಿಗ್ ಸ್ಟರ್ (Renault Bigster) 7 ಸೀಟರ್ ಮಾದರಿಯನ್ನು ಭಾರತ ಸೇರಿದಂತೆ ವಿಶ್ವದ ಪ್ರಮುಖ ಮಾರುಕಟ್ಟೆಗಳಿಗೆ ಹಂತ ಹಂತವಾಗಿ ಪರಿಚಯಿಸಲಿದೆ. ಭಾರತದಲ್ಲಿ ಹೊಸ ಡಸ್ಟರ್ ಕಾರು 2024ರ ಕೊನೆಯಲ್ಲಿ ಇಲ್ಲವೆ 2025ರ ಆರಂಭದಲ್ಲಿ ಬಿಡುಗಡೆಯಾಗಬಹುದಾಗಿದ್ದು, ಇದು ಸಿಎಂಎಫ್-ಬಿ ಪ್ಲ್ಯಾಟ್ ಫಾರ್ಮ್ ಅಡಿ ನಿರ್ಮಾಣವಾಗಿದೆ. ಇನ್ನು ಸ್ವಲ್ಪ ಸಮಯದ ನಂತರ ನಿಸ್ಸಾನ್ ಕೂಡ ಅಂತಹ ಮಾದರಿಯ ಕಾರ್ ಬಿಡುಗಡೆ ಮಾಡುವುದಾಗಿ ಹೇಳಿದೆ.

ರೆನಾಲ್ಟ್ ಬಿಗ್ ಸ್ಟರ್ SUV (Renault Bigster SUV)

ಬಿಗ್ ಸ್ಟರ್ SUV ಮತ್ತು ರೆನಾಲ್ಟ್ ಡಸ್ಟರ್ SUV ಬಹಳಷ್ಟು ಫೀಚರ್ಸ್ ಹೊಂದಿದ್ದು ಈ ಎರಡೂ ಮಾದರಿಗಳು CMF-B ಫ್ಲಾಟ್ ಫಾರ್ಮ್ ಹಂಚಿಕೊಳ್ಳುತ್ತದೆ. ಸರಿಸುಮಾರು 4.6 ಉದ್ದದ ಈ ಬಿಗ್ ಸ್ಟರ್ ಡಸ್ಟರ್ ಗಿಂತ ಸರಿ ಸುಮಾರು 300 mm ಉದ್ದವಾಗಿರುತ್ತದೆ. ಅಷ್ಟೇ ಅಲ್ಲದೇ ಇದು ಸ್ವಲ್ಪ ಉದ್ದವಾದ ವೀಲ್ ಬೇಸ್ ಹೊಂದಿದ್ದು ಹ್ಯುಂಡೈ ಅಲ್ಕಾಜರ್ (Hyundai Alcazar) ಹೊಂದಿರುವಂತೆ ಈ ವಾಹನಕ್ಕೆ ಕೂಡ ಹಿಂಬಾಗದ ಬಾಗಿಲು ದೊಡ್ಡದಾಗಿರುತ್ತದೆ. ಹೊಸ ಡಸ್ಟರ್ ಎಸ್‍ಯುವಿಯು ಮತ್ತು ಬಿಗ್ ಸ್ಟರ್ ಮಾದರಿಯ ಕಾರುಗಳಲ್ಲಿ ಹಲವಾರು ವಿನ್ಯಾಸ ಒಂದೇ ರೀತಿಯಲ್ಲಿದೆ ಜೊತೆಗೆ ಆಧುನಿಕ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಸ್ಪೋರ್ಟಿ ವಿನ್ಯಾಸದೊಂದಿಗೆ ಮತ್ತಷ್ಟು ಗ್ರಾಹಕರನ್ನು ಸೆಳೆಯಲಿದೆ.

Image Source: Autocar India

ರೆನಾಲ್ಟ್ ಬಿಗ್ ಸ್ಟರ್ ಪವರ್ ಟ್ರೇನ್

ಪವರ್ ಟ್ರೇನ್ ಬಗ್ಗೆ ಹೆಚ್ಚಿನ ಮಾಹಿತಿ ಬಿಡುಗಡೆ ಮಾಡಿಲ್ಲವಾದರೂ ಹೊಸ ಪೀಳಿಗೆಯ ಡಸ್ಟರ್ ಮೂರು ಇಂಜಿನ್ ಆಯ್ಕೆಗಳೊಂದಿಗೆ ಬರುತ್ತವೆ. ಅದರಲ್ಲಿ ಎರಡು ಎಲೆಕ್ಟ್ರಿಕ್ ಮಾದರಿಗಳೂ ಹಾಗೂ ಮೂರನೇ ಮಾದರಿಯ ಎಂಜಿನ್ ರೆನಾಲ್ಟ್ ಬಿಗ್ ಸ್ಟರ್ ನಲ್ಲಿ ಕೂಡ ಲಭ್ಯವಿರುತ್ತದೆ.

advertisement

ರೆನಾಲ್ಟ್ ಬಿಗ್ ಸ್ಟರ್ ಬ್ಯಾಟರಿ

ಇದು ಎರಡು ಎಲೆಕ್ಟ್ರಿಕ್ ಮೋಟಾರ್ಗಳನ್ನು ಹೊಂದಿರುತ್ತದೆ ಇದರಲ್ಲಿ ಒಂದು 1.2kWh ಬ್ಯಾಟರಿಯೊಂದಿಗೆ ಬರುತ್ತದೆ. ಇದು 80 ಪ್ರತಿಶತ ಸಮಯದವರೆಗೆ ನಿವ್ವಳ ವಿದ್ಯುತ್ ಚಾಲನೆಯನ್ನು ಅನುಮತಿಸುತ್ತದೆ. ಇದೇ ಸಮಯದಲ್ಲಿ ಇದು ಸ್ವಯಂ ಚಾಲಿತ ಗೇರ್ ಬಾಕ್ಸ್ ನೊಂದಿಗೆ ಬರುತ್ತದೆ, 1.2 ಲೀಟರ್ ಯೂನಿಟ್ ಇಂಜಿನ್ 130hp ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಡಸ್ಟರ್ ಕೆಲವು ಮಾರುಕಟ್ಟೆ ಯಲ್ಲಿ 1.0  ಲೀಟರ್ ಪೆಟ್ರೋಲ್ ಎಲ್ ಪಿ ಜಿ ಯೊಂದಿಗೆ ಬರಲಿದೆ. ಡೀಸೆಲ್ ಸದ್ಯಕ್ಕೆ ಯಾವುದೇ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ.

Image Source: Gaadiwaadi.com

ರೆನಾಲ್ಟ್ ಬಿಗ್ ಸ್ಟರ್ (Renault Bigster) ಆಫ್ ರೋಡ್ ಗೆ ಬಳಸಬಹುದೇ?

ರೆನಾಲ್ಟ್ ಬಿಗ್ ಸ್ಟರ್ ಮಾರುಕಟ್ಟೆಗೆ ಅನುಗುಣವಾಗಿ 4X2 ಮತ್ತು 4X3 ಆಯ್ಕೆಗಳನ್ನು ಹೊಂದಿರುತ್ತದೆ. ಹೊಸ ಡಸ್ಟರ್ನಂತೆ ಇದು ಲ್ಯಾಡರ್ ಪ್ರೈಸ್ ಆಧಾರಿತ ಜಿಮ್ನಿ ಅಂತಹ 4X4 ಸೆಟಪ್ ಅನ್ನು ಪಡೆದಿರುವುದಿಲ್ಲ. ಆದರೆ ಇದು ಆಟೋ, ಸ್ನೋ, ಮಡ್, ಸ್ಯಾಂಡ್ ಮತ್ತು ಆಫ್ ರೋಡ್ ಗಳ ಮೋಡ್ ಗಳನ್ನು ಹೊಂದಿರುತ್ತದೆ.

ರೆನಾಲ್ಟ್ ಬಿಗ್ ಸ್ಟರ್ ಭಾರತದಲ್ಲಿ ಯಾವಾಗ ಬಿಡುಗಡೆಯಾಗುತ್ತದೆ ?

ಹೊಸ ಡಸ್ಟರ್ 2025ರಲ್ಲಿ ಬಿಡುಗಡೆಯಾಗುತ್ತದೆ ಅದರ ನಂತರವೇ ಭಾರತದಲ್ಲಿ ಬಿಗ್ ಸ್ಟರ್ ಬಿಡುಗಡೆ ಆಗುತ್ತದೆ ಎಂದು ಹೇಳಲಾಗುತ್ತಿದೆ. ಅತ್ಯಾಧುನಿಕ ವಿನ್ಯಾಸ ಮತ್ತು ಬಹುಮುಖ ಪವರ್‌ಟ್ರೇನ್ ಆಯ್ಕೆಗಳ ಮಿಶ್ರಣ ಹೊಂದಿರುವ ಈ ಕಾರನ್ನು ಜನ ನಿರೀಕ್ಷಿಸುತ್ತಿದ್ದಾರೆ. ಇದರ ಬೆಲೆ ಕೂಡ ಸುಮಾರು 13 ಲಕ್ಷದಿಂದ ಆರಂಭವಾಗಲಿದೆ ಎನ್ನಲಾಗುತ್ತಿದೆ.

advertisement

Leave A Reply

Your email address will not be published.