Karnataka Times
Trending Stories, Viral News, Gossips & Everything in Kannada

Agriculture Road: ಕೃಷಿ ಭೂಮಿಗೆ ದಾರಿಯ ಸಮಸ್ಯೆ ಇದ್ದವರಿಗೆ ಬಂಪರ್ ಗಿಫ್ಟ್! ಎಲೆಕ್ಷನ್ ಗೂ ಮುನ್ನವೇ ಘೋಷಣೆ

advertisement

ಕೃಷಿ ಮಾಡಬೇಕು ಎಂದು ಅನೇಕ ರೈತರು ಅಂದು ಕೊಳ್ಳುತ್ತಾರೆ ಭೂಮಿ ಇದ್ದು ಕೃಷಿ ಮಾಡಲು ಕೆಲವು ಸಲ ಸಮಸ್ಯೆ ಆಗಲಿದೆ. ಅಕ್ಕಿ, ಜೋಳ, ರಾಗಿ ಎಂದು ಅನೇಕ ಜನ ಕೃಷಿಯಲ್ಲಿ ತೊಡಗಬೇಕು ಎಂದಾಗ ಅವರಿಗೆ ಜಮೀನಿಗೆ ಹೋಗಲು ದಾರಿಯೇ ಇಲ್ಲದ ಪರಿಸ್ಥಿತಿ ನಿರ್ಮಾಣ ಆಗಲಿದೆ.

ಕೃಷಿ ಭೂಮಿಯಲ್ಲಿ ಜಮೀನು ಹೋಗಲು ದಾರಿ (Agriculture Road) ನೀಡದಿದ್ದರೆ ಅಂತವರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಬಹುದು. ಆ ಕಾನೂನು ಕ್ರಮ ಏನು ಯಾವ ಕಾನೂನು ಯಾವುದಕ್ಕೆ ಸಂಬಂಧ ಪಟ್ಟದ್ದಾಗಿದೆ ಎಂಬ ಇತ್ಯಾದಿ‌ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಲಿದ್ದೇವೆ.

ಕೃಷಿ ಮಾಡುವಾಗ ನೀರಿನ, ಬಂಡವಾಳದ ಸಮಸ್ಯೆ ಆಗುವುದನ್ನು ನಾವು ನೋಡಿರುತ್ತೇವೆ ಅದೇ ರೀತಿ ಕೃಷಿ ಭೂಮಿಗೆ ಹೋಗಲು ಕೂಡ ವ್ಯವಸ್ಥೆ ಇಲ್ಲದಿರುವುದು ಕೂಡ ಒಂದು ಸಮಸ್ಯೆ ಎನ್ನಬಹುದು. ಹಾಗಾದರೆ ಕೃಷಿ ಮಾಡುವಾಗ ನಿಮ್ಮ  ಜಮೀನಿಗೆ ಇದ್ದ ದಾರಿ ಮುಚ್ಚಿ ಹೋಗುವುದು ಅಥವಾ ಅಕ್ಕ ಪಕ್ಕದ ಜಮೀನಿನವರು ವ್ಯಾಜ್ಯದ ತಕರಾರು ಎತ್ತುವುದನ್ನು ಮಾಡುತ್ತಾರೆ ಆಗ ನೀವು ಏನು ಮಾಡಬಹುದು ಎಂಬುದನ್ನು ಇಲ್ಲಿ ತಿಳಿಯಿರಿ.

ಕಾನೂನಿನ ನೆರವು:

 

advertisement

Image Source: Adobe Stock

 

ನೀವು ಜಮೀನು ಅಥವಾ ಕೃಷಿ ಭೂಮಿಗೆ ಹೋಗಲು ದಾರಿ (Agriculture Road) ಇಲ್ಲದಿದ್ದಾಗ ಕಾನೂನಿನ ನೆರವು ಪಡೆದು ದಾರಿಯನ್ನು ನ್ಯಾಯೋಚಿತವಾಗಿ ಪಡೆಯಬಹುದು. ಅದಕ್ಕಾಗಿ Easements act ಎನ್ನುವುದು ನಿಮ್ಮ ನೆರವಿಗೆ ಬರಲಿದೆ. ಈ ಒಂದು ಕಾಯ್ದೆ ಜಾರಿಯಾಗಿರುವುದೇ ಕೃಷಿ ಭೂಮಿಯ ದಾರಿ (Agriculture Road) ಸಮಸ್ಯೆ ಬಗೆಹರಿಸುವ ಉದ್ದೇಶದಿಂದ ಎನ್ನಬಹುದು. ಹಾಗಾಗಿ ಕೃಷಿ ಭೂಮಿಯ ದಾರಿಯ ಎಲ್ಲ ತರದ ಸಮಸ್ಯೆಗೆ ಪ್ರತ್ಯೇಕ ಕಾನೂನು ನಿಯಮಗಳು ಇದ್ದು ಅವುಗಳು ನಿಮ್ಮ ನೆರವಿಗೆ ಬರಲಿವೆ.

ಇದರಲ್ಲಿಯೂ ಪ್ರತ್ಯೇಕ ವಿಧಗಳಿವೆ:

 

Image Source: Pngtree

 

  • Easement of Prescription ಅಂದರೆ ಸುಮಾರು 15-20ವರ್ಷದಿಂದ ಇದ್ದ ದಾರಿ ಮುಚ್ಚಿ ಅದರಲ್ಲಿ ಕೃಷಿ ಮಾಡಿದರೆ ಜಮೀನಿಗೆ ಹೋಗಲು ದಾರಿಯೇ ನೀಡದಿದ್ದರೆ ಆಗ ಈ  ಆಗುವ ಕಾಯ್ದೆ Easement of prescription ಎಂದು ಆಗಿದೆ. ಇದರ ಮೂಲಕ ಕೇಸ್ ದಾಖಲಿಸಿದರೆ ನಿಮಗೆ ದಾರಿ ಸಿಗಲಿದೆ.
  • Easement of Custom ನಲ್ಲಿ  ಅನೇಕ ವರ್ಷದಿಂದ ಅಂದರೆ ತಾತ ಮುತ್ತಾತನ ಕಾಲದಲ್ಲಿ ಜಮೀನು ಹೋಗುವ ದಾರಿ ಆಗಿದ್ದರೆ ಅದನ್ನು ಬಂದ್ ಮಾಡುವಂತಿಲ್ಲ ಹಿಂದಿನ ಜಮೀನು ಹೋಗಲು ದಾರಿ ನೀಡಬೇಕು ಎಂಬ ನಿಯಮ ಇದೆ.
  • Easement of Necessity ಅಂದರೆ ಮುಂಭಾಗದ ಜಮೀನಿನ ರೈತ ಹಿಂಭಾಗದ ಜಮೀನಿನ ರೈತರಿಗೆ ಜಮೀನು ಹೋಗಲು ದಾರಿ ಮಾಡಿ ಕೊಡಬೇಕು ಎಂಬುದನ್ನು ವಿವರಿಸಲಿದೆ. ಇದರಲ್ಲಿ ಕೇಸ್ ದಾಖಲಿಸಿದರೆ ನಿಮ್ಮ ಜಮೀನಿಗೆ ಹೋಗಲು ದಾರಿ ಸಿಗಲಿದೆ.
  • ಒಟ್ಟಾರೆಯಾಗಿ ಜಮೀನಿನಲ್ಲಿ ಯಂತ್ರೋಪಕರಣಗಳನ್ನು ಕೊಂಡೊಯ್ಯಲು ಅಥವಾ ಕೃಷಿ ಮಾಡಲು ಸಾಧ್ಯ ಆಗುತ್ತಿಲ್ಲ ನಮಗೆ ದಾರಿ ಅವಶ್ಯವಾಗಿ ನೀಡಲೇ ಬೇಕು ಎನ್ನುವವರು ಕಾನೂನಾತ್ಮಕ ಹೋರಾಟ ಮಾಡಿ ತಮ್ಮ ಜಮೀನಿಗೆ ಹೋಗಲು ದಾರಿ (Agriculture Road) ಪಡೆಯಬಹುದಾಗಿದೆ.

advertisement

Leave A Reply

Your email address will not be published.