Karnataka Times
Trending Stories, Viral News, Gossips & Everything in Kannada

Gas Cylinder: ಮನೆಯಲ್ಲಿ ಇನ್ನು ಕೂಡ ಹಳೆಯ ಮಾದರಿಯ ಗ್ಯಾಸ್ ಸಿಲಿಂಡರ್ ಇದ್ದವರಿಗೆ ಗುಡ್ ನ್ಯೂಸ್! ಕೂಡಲೇ ಈ ಕೆಲಸ ಮಾಡಿ

advertisement

ಎಲ್ಪಿಜಿ ಗ್ಯಾಸ್ ಸಿಲೆಂಡರ್ (LPG Cylinder) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರಮುಖವಾಗಿ ಪ್ರತಿಯೊಬ್ಬರು ಕೂಡ ಭಾರತ ದೇಶದಲ್ಲಿ ಬಳಸುತ್ತಿದ್ದಾರೆ. ಅದರಲ್ಲಿ ವಿಶೇಷವಾಗಿ ಮನೆಯ ಮಹಿಳೆಯರು ಸೌದೆಯ ಒಲೆಯಲ್ಲಿ ಅಡುಗೆ ಮಾಡುವ ಮೂಲಕ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ತಿಳಿದಿರುವಂತಹ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಉಜ್ವಲ ಯೋಜನೆ (Ujjwala Yojana) ಯ ಮೂಲಕ ಗ್ಯಾಸ್ ಕನೆಕ್ಷನ್ ಅನ್ನು ದೇಶದ ತುಂಬಾ ನೀಡುವಂತಹ ಕೆಲಸವನ್ನು ಕೂಡ ಮಾಡಿದ್ದಾರೆ.

ಮೊದಲಿಗೆ ಹೋಲಿಸಿದರೆ ಪ್ರತಿಯೊಂದು ಮನೆಗಳಲ್ಲಿ ಕೂಡ ಈಗ ಗ್ಯಾಸ್ ಕನೆಕ್ಷನ್ (Gas Connection) ಅನ್ನು ಕಾಣಬಹುದಾಗಿದೆ. ಆದರೆ ಇವತ್ತಿನ ಲೇಖನದಲ್ಲಿ ವಿಶೇಷವಾಗಿ ನಾವು ಮಾತನಾಡಲು ಹೊರಟಿರೋದು ಕಂಪೋಸಿಟ್ ಸಿಲಿಂಡರ್ (Composite Cylinder) ಬಗ್ಗೆ. ಇತ್ತೀಚಿನ ದಿನಗಳಲ್ಲಿ ಇದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಇದರಿಂದ ಆಗುವ ಲಾಭಗಳೇನು ಎಂಬುದನ್ನು ತಿಳಿಯೋಣ ಬನ್ನಿ.

ಕಂಪೋಸಿಟ್ ಸಿಲಿಂಡರ್ (Composite Cylinder) ನಿಂದ ಆಗುವ ಲಾಭಗಳು:

 

Image Source: Azeloglu Lab

 

advertisement

ಕಂಪೋಸಿಟ್ ಸಿಲಿಂಡರ್ (Composite Cylinder) ಇತ್ತೀಚಿನ ದಿನಗಳಲ್ಲಿ ಇದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆ ಮಿನಿಸ್ಟ್ರಿ ಆಫ್ ಪೆಟ್ರೋಲಿಯಂ ಹಾಗೂ ನ್ಯಾಚುರಲ್ ಗ್ಯಾಸ್ ಅಡಿಯಲ್ಲಿ ಜಾರಿಗೆ ತಂದಿರುವಂತಹ ಗ್ಯಾಸ್ ಆಗಿದೆ. ನೋಡೋದಕ್ಕೆ ಸಾಮಾನ್ಯವಾಗಿ ಇರುವಂತಹ ಸಿಲಿಂಡರ್ ಗ್ಯಾಸ್ ಗೆ ಹೋಲಿಸಿದರೆ ಕಾಂಪೋಸಿಟ್ ಗ್ಯಾಸ್ ಸಾಕಷ್ಟು ವಿಭಿನ್ನವಾಗಿರುತ್ತದೆ ಹಾಗೂ ಲಾಭದಾಯಕವಾಗಿ ಕೂಡ ಇರುತ್ತದೆ ಹಾಗಾಗಿ ಬನ್ನಿ ಅವುಗಳ ಲಾಭದ ಬಗ್ಗೆ ತಿಳಿಯೋಣ.

  1. ಮೊದಲನೇದಾಗಿ ಸಾಮಾನ್ಯ ಸಿಲಿಂಡರ್ ಗ್ಯಾಸ್ (Gas Cylinder) ಗೆ ಹೋಲಿಸಿದರೆ ಈ ವಿಭಿನ್ನವಾಗಿರುವಂತಹ ಸಿಲಿಂಡರ್ ಗ್ಯಾಸ್ 50% ತೂಕದಲ್ಲಿ ಕಡಿಮೆಯಾಗಿರುತ್ತದೆ. ಹೀಗಾಗಿ ನೀವು ಯಾವುದೇ ಆಯಾಸವಿಲ್ಲದೆ ಸುಲಭ ರೂಪದಲ್ಲಿ ಈ ಸಿಲಿಂಡರ್ ಗ್ಯಾಸ್ ಅನ್ನು ನೀವು ಎತ್ತಬಹುದಾಗಿದೆ ಹಾಗೂ ಒಂದು ಕಡೆಯಿಂದ ಇನ್ನೊಂದು ಕಡೆಗೆ ವರ್ಗಾವಣೆ ಮಾಡಬಹುದಾಗಿದೆ.
  2. ಎಲ್ಲದಕ್ಕಿಂತ ಹೆಚ್ಚಾಗಿ ಪ್ರತಿಯೊಂದು ಮನೆಗಳಲ್ಲಿ ಕೂಡ ಕೆಲವೊಂದು ಭಯ ಖಂಡಿತವಾಗಿ ಇದ್ದೇ ಇರುತ್ತದೆ ಅದೇನೆಂದರೆ ಸಿಲಿಂಡರ್ ಗ್ಯಾಸ್ ಬ್ಲಾ-ಸ್ಟ್ ಆದ್ರೆ ಏನು ಮಾಡೋದು ಅಂತ. ಕಂಪೋಸಿಟ್ ಸಿಲಿಂಡರ್ ಗ್ಯಾಸ್ ನಲ್ಲಿ ನೀವು ಈ ವಿಚಾರದ ಬಗ್ಗೆ ಯಾವುದೇ ರೀತಿಯ ಸಾಲಿಕಟಿಸಿಕೊಳ್ಳಬೇಕಾದ ಅಗತ್ಯವಿರುವುದಿಲ್ಲ ಯಾಕೆಂದರೆ ಇದು ಬ್ಲಾ-ಸ್ಟ್ ಪ್ರೂಫ್ ಆಗಿರುತ್ತದೆ. ಹೀಗಾಗಿ ಇದು ಅತ್ಯಂತ ಸುರಕ್ಷಿತ ಗ್ಯಾಸ್ ಸಿಲಿಂಡರ್ ಆಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

 

Image Source: Stichting Help Mij Leven

 

  1. ಇನ್ನು ಸಾಮಾನ್ಯವಾಗಿ ಇರುವಂತಹ ಮೆಟಲ್ ಬಾಡಿಯ ಸಿಲಿಂಡರ್ ಗ್ಯಾಸ್ ಕೆಳಭಾಗದಲ್ಲಿ ತುಕ್ಕು ಹಿಡಿಯುವುದು ಹೆಚ್ಚಾಗಿ ಕಂಡುಬರುತ್ತದೆ. ಇದರಿಂದಾಗಿ ಕೆಳಗೆ ಇರುವಂತಹ ನೆಲ ಕೂಡ ಕೆಟ್ಟುಹೋಗುತ್ತದೆ ಹಾಗೂ ಬೇರೆ ಸಮಸ್ಯೆಗಳನ್ನು ಕೂಡ ನೀವು ಎದುರಿಸಬೇಕಾಗಿ ಬರಬಹುದು. ಆದರೆ ಕಂಪೋಸಿಟ್ ಸಿಲಿಂಡರ್ ಗ್ಯಾಸ್ (Composite Cylinder Gas) ನಲ್ಲಿ ಈ ರೀತಿಯ ಸಮಸ್ಯೆಗಳು ನೀವು ಎದುರಿಸುವಂತಹ ಯಾವುದೇ ಪ್ರಮೇಯ ಬರುವುದಿಲ್ಲ. ಹೀಗಾಗಿ ಇದು ಕೂಡ ಮತ್ತೊಂದು ಲಾಭ ಎಂದು ಹೇಳಬಹುದಾಗಿದೆ.
  2. ನಾಲ್ಕನೇದಾಗಿ ಹಾಗೂ ಕೊನೆಯದಾಗಿ ಸಾಮಾನ್ಯವಾಗಿ ಇರುವಂತಹ ಸಿಲಿಂಡರ್ ಗ್ಯಾಸ್ ನಲ್ಲಿ ನೀವು ಎಷ್ಟು ಪ್ರಮಾಣದಲ್ಲಿ ಗ್ಯಾಸ್ ಉಳಿದಿದೆ ಎಂಬುದಾಗಿ ಚೆಕ್ ಮಾಡುವುದು ಕಷ್ಟಸಾಧ್ಯ. ಆದರೆ ಕಂಪೋಸಿಟ್ ಸಿಲಿಂಡರ್ ಗ್ಯಾಸ್ ನಲ್ಲಿ ಎಷ್ಟು ಗ್ಯಾಸ್ ಉಳಿದಿದೆ ಎನ್ನುವಂತಹ ಸ್ಪಷ್ಟ ಚಿತ್ರಣ ನಿಮ್ಮ ಕಣ್ಣ ಮುಂದೆ ಸಿಗುತ್ತದೆ. ಇದೊಂದು ಅತ್ಯಂತ ಪ್ರಮುಖ ಲಾಭ ಎಂದು ಹೇಳಬಹುದಾಗಿದೆ.

ಇನ್ನು ಕಾಂಪೋಸಿಟ್ ಸಿಲಿಂಡರ್ ಗ್ಯಾಸ್ (Composite Cylinder Gas) ಬೆಲೆ ಬಗ್ಗೆ ಮಾತನಾಡುವುದಾದರೆ ಇದನ್ನು ಖರೀದಿಸುವುದಕ್ಕೆ ನೀವು ಹತ್ತು ಕೆಜಿಗೆ 3000 ರೂಪಾಯಿಗಳ ಸೆಕ್ಯೂರಿಟಿ ಡೆಪಾಸಿಟ್ ಅನ್ನು ನೀಡಬೇಕಾಗಿರುತ್ತದೆ ಹಾಗೂ ಗ್ಯಾಸ್ ತುಂಬಿಸುವುದಕ್ಕೆ 500 ರಿಂದ 600 ರೂಪಾಯಿಗಳವರೆಗೆ ಹಣವನ್ನು ನೀಡಬೇಕಾಗಿರುತ್ತದೆ.

advertisement

Leave A Reply

Your email address will not be published.