Karnataka Times
Trending Stories, Viral News, Gossips & Everything in Kannada

RBI: ದೇಶದ ಹೆಮ್ಮೆಯ ಈ ಬ್ಯಾಂಕಿನ ಮೇಲೆ ಕಣ್ಣಿಟ್ಟ ರಿಸರ್ವ್ ಬ್ಯಾಂಕ್! ಖಾತೆ ಇದ್ದವರು ನೋಡಿಕೊಳ್ಳಿ

advertisement

ಬ್ಯಾಂಕುಗಳ ವಹಿವಾಟಿನ ಮೇಲೆ ನಿಗಾ ವಹಿಸಲು RBI ಸದಾ ಕಾಲ ಜಾಗೃತೆ ವಹಿಸುತ್ತಲೇ ಇರುತ್ತದೆ. ತನ್ನ ಅಧೀನದಲ್ಲಿ ಇರುವ ಬ್ಯಾಂಕ್ ಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲು RBI ಕೆಲವೊಂದು ಅಗತ್ಯ ಸೂಚನೆಗಳನ್ನು ನೀಡುತ್ತಲೇ ಇರಲಿದೆ. ಹೀಗಾಗಿ ತನ್ನ ಅಧೀನಕ್ಕೆ ಬರುವ ಬ್ಯಾಂಕುಗಳ ವಹಿವಾಟು, ಕಾನೂನಿನ ನಿಯಮ ಪಾಲನೆ ಎಲ್ಲ ಸಂಬಂಧಿತ ಆದೇಶ ಕೂಡ ಬರುವುದು RBI ಮೂಲಕವೇ ಎಂದು ಹೇಳಬಹುದು. ಈಗ ಕೋಟಕ್ ಮಹೀಂದ್ರ ಬ್ಯಾಂಕ್ (Kotak Mahindra Bank) ನ ವ್ಯವಹಾರದ ಮೇಲೆ ಹೋಸ ಗ್ರಾಹಕರ ಆನ್ಬೋರ್ಡ್ ಮಾಡುವ ಕುರಿತು ನಿಷೇಧ ಹೊರಡಿಸಿದೆ.

ಯಾಕಾಗಿ ಈ ನಿಷೇಧ:

ಬಹುತೇಕ ಪ್ರಸಿದ್ಧ ಖಾಸಗಿ ಬ್ಯಾಂಕ್ ನಲ್ಲಿ ಒಂದಾದ ಕೋಟಕ್ ಮಹೀಂದ್ರಾ ಬ್ಯಾಂಕ್ ನಲ್ಲಿ ಡೇಟಾ ಭದ್ರತಾ ಕಾಳಜಿಯನ್ನು ಉಲ್ಲೇಖಿಸಿರುವ ಆರೋಪದ ಅಡಿಯಲ್ಲಿ RBI ಕೋಟಕ್ ಮಹೀಂದ್ರ ಬ್ಯಾಂಕಿನ (Kotak Mahindra Bank) ವಿರುದ್ಧ ತನ್ನ ಆದೇಶ ಹೊರಡಿಸಿದೆ. ಅದರಲ್ಲಿ ಅನೇಕ ಅಂಶವನ್ನು ಕಾನೂನಿನ ಪ್ರಕಾರವೇ ಉಲ್ಲೇಖಿಸಿ ಅನೇಕ ನೀತಿ ನಿರ್ಬಂಧ ಪಾಲಿಸುವಂತೆ ಆದೇಶದಲ್ಲಿ ಪ್ರತ್ಯೇಕವಾಗಿ ತಿಳಿಸಲಾಗಿದೆ. ಅದರಲ್ಲಿ ಏನು ಇದೆ ಎಂಬುದು ಈ ಕೆಳಗಿನಂತಿದೆ.

 

Image Source: Mint

ಕಾಯ್ದೆ ಉಲ್ಲೇಖಿಸಿ ಆದೇಶ:

advertisement

ಬ್ಯಾಂಕಿಗೆ ಸಂಬಂಧ ಪಟ್ಟಂತೆ ಕಾನೂನಿನಲ್ಲಿ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ಸೆಕ್ಷನ್ 35A ಅಡಿಯಲ್ಲಿ RBI ತನ್ನ ನೂತನ ಅಧಿಕಾರವನ್ನು ಚಲಾಯಿಸಿದೆ. ಹಾಗಾಗಿ ತನ್ನ ಆನ್ಲೈನ್ ಮತ್ತು ಮೊಬೈಲ್ ಬ್ಯಾಂಕಿಂಗ್ ಮೂಲಕ ಹೊಸ ಗ್ರಾಹಕರನ್ನು ಆನ್ಬೋರ್ಡ್ ಮಾಡುವುದು, ಹೊಸ ಕ್ರೆಡಿಟ್ ಕಾರ್ಡ್ ನೀಡಿಕೆ ಜಾರಿಯಾಗದಂತೆ ನಿಷೇಧ ಮಾಡಲಾಗಿದೆ. ಪ್ರಸ್ತುತ ಇರುವ ಕೋಟಕ್ ಮಹೀಂದ್ರ ಗ್ರಾಹಕರ ಹಾಗೂ ಕ್ರೆಡಿಟ್ ಕಾರ್ಡ್ ಹೊಂದಿದ್ದವರ ಸೇವೆ ಹಾಗೇ ಮುಂದುವರಿಯಲಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಉದ್ದೇಶ ಏನು?

 

Image Source: Telegraph India

 

ಕೋಟಕ್ ಮಹಿಂದ್ರಾ ಬ್ಯಾಂಕಿ (Kotak Mahindra Bank) ನಲ್ಲಿ ಅನೇಕ ನ್ಯೂನ್ಯತೆ ಕಂಡು ಬಂದಿದ್ದು ಅದನ್ನು ಪರಿಹರಿಸುವ ನೆಲೆಯಲ್ಲಿ RBI ಈ ಆದೇಶ ನೀಡಿದೆ. 2022-23ರಲ್ಲಿ RBI IT ಪರೀಕ್ಷೆ ಮಾಡಲ್ಪಟ್ಟಿತ್ತು. ಅನೇಕ ಬ್ಯಾಂಕಿನಲ್ಲಿ ವ್ಯವಹಾರದ ವೈಫಲ್ಯ ಆಗುವುದು ಸಹ ತಿಳಿದು ಬಂದಿದೆ ಅಂತಹ ಬ್ಯಾಂಕಿನ ಸಾಲಿನಲ್ಲಿ ಕೋಟಕ್ ಮಹೀಂದ್ರ ಕೂಡ ಸೇರಿದೆ. IT ದಾಸ್ತಾನು ನಿರ್ವಹಿಸುವ ಮತ್ತು ಅದರ ಡೇಟಾ ಭದ್ರಪಡಿಸುವ ವಿಧಾನದಲ್ಲಿ ನ್ಯೂನ್ಯತೆ ಇದೆ ಎಂಬುದು ತಿಳಿದು ಬಂದ ಹಿನ್ನೆಲೆ ಈ ನಿರ್ಣಯಕ್ಕೆ ಬರಲಾಗಿದೆ.

ಒಟ್ಟಾರೆಯಾಗಿ ಕೋಟಕ್ ಮಹೀಂದ್ರ ಬ್ಯಾಂಕಿನಲ್ಲಿ ಇದ್ದ ಅನೇಕ ವ್ಯವಸ್ಥೆ RBI ವ್ಯಾಪ್ತಿಗೆ ಒಳಪಟ್ಟು ಅನೇಕ ಸಂಗತಿಗಳು ಬದಲಾವಣೆ ಆಗಲಿದೆ. ಹಾಗಾಗಿ ಕೋಟಕ್ ಮಹೀಂದ್ರ ಬ್ಯಾಂಕಿನಲ್ಲಿ ಹೊಸ ಗ್ರಾಹಕರ ಸೇರಿಸುವುದು ಅವರಿಗೆ ಕ್ರೆಡಿಟ್ ಕಾರ್ಡ್ (Credit Card) ನೀಡುವಿಕೆ ಇತ್ಯಾದಿ ಸಂಗತಿಯಲ್ಲಿ ಬದಲಾವಣೆ ಆಗಲಿದೆ‌.

advertisement

Leave A Reply

Your email address will not be published.