Karnataka Times
Trending Stories, Viral News, Gossips & Everything in Kannada

RTO: HSRP ಅಲ್ಲ ಈ ಅಪರಾಧಕ್ಕೆ 10 ಸಾವಿರ ರೂ ದಂಡ ವಿಧಿಸಲು ಮುಂದಾದ RTO! ಎಲ್ಲಾ ರಾಜ್ಯಗಳಿಗೂ ಅನ್ವಯ.

advertisement

ಸರ್ಕಾರ ಈಗಾಗಲೇ ಪ್ರತಿಯೊಂದು ವಾಹನಗಳು ಕೂಡ ತಮ್ಮ ನಂಬರ್ ಪ್ಲೇಟ್ ಬದಲಾಯಿಸಿಕೊಂಡು HSRP Number Plate ಗಳನ್ನು ನಿಮ್ಮ ತೊಂದರೆಗಳಿಗೆ ಅಳವಡಿಸಿಕೊಳ್ಳಬೇಕು ಎನ್ನುವಂತಹ ಕಡ್ಡಾಯ ನಿಯಮವನ್ನು ಜಾರಿಗೆ ತಂದಿದೆ. ಗಡುವು ಮೀರಿದ ನಂತರ ಒಂದು ವೇಳೆ ನಂಬರ್ ಪ್ಲೇಟ್ ಗಳನ್ನು ಅಳವಡಿಸಿಕೊಳ್ಳದೆ ಹೋದಲ್ಲಿ ಕಾನೂನಾತ್ಮಕ ಶಿಕ್ಷೆ ಅಥವಾ ದಂಡವನ್ನು ಕಟ್ಟಬೇಕಾದ ಅಂತಹ ಸಾಧ್ಯತೆ ಕೂಡ ಇರುತ್ತದೆ.

ಇದರ ಜೊತೆಗೆ ನೀವು ಕಾರಿನಲ್ಲಿ ಪ್ರಯಾಣ ಮಾಡುವಾಗ ಕೆಲವೊಂದು ಪ್ರಮುಖ ಡಾಕ್ಯುಮೆಂಟ್ ಗಳನ್ನು ಇಟ್ಟುಕೊಳ್ಳಬೇಕಾಗಿರುವುದು ಅಗತ್ಯವಾಗಿರುತ್ತದೆ. ಇದೇ ರೀತಿ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಇದೊಂದು ದಾಖಲೆ ನಿಮ್ಮ ವಾಹನದಲ್ಲಿ ಇಲ್ಲ ಅಂದ್ರೆ ಹತ್ತು ಸಾವಿರ ರೂಪಾಯಿಗಳ ವರೆಗೂ ಫೈನ್ ಕಟ್ಟಬೇಕಾಗುತ್ತದೆ.

ಇದು ಇಲ್ಲ ಅಂದ್ರೆ 10,000 ಫೈನ್ ಕಟ್ಟೋಕೆ ರೆಡಿಯಾಗಿ:

ಹೌದು ನಾವ್ ಮಾತಾಡ್ತಾ ಇರೋದು ಪಿಯುಸಿ ಸರ್ಟಿಫಿಕೇಟ್ (PUC Certificate) ಅಂದ್ರೆ ನಿಮ್ಮ ವಾಹನದ ಹೊಗೆ ಚೆಕ್ ಸರ್ಟಿಫಿಕೇಟ್. ಇದನ್ನು ಮಾಡೋದಕ್ಕೆ ಕೇವಲ ನೂರು ರೂಪಾಯಿ ಆಗಿರಬಹುದು ಆದರೆ ಇದು ಇಲ್ಲದೆ ಹೋದಲ್ಲಿ ನೀವು 10000 ರೂಪಾಯಿಗಳವರೆಗೆ ದಂಡವನ್ನು ಕಟ್ಟಬೇಕಾಗಿರುತ್ತದೆ. ಈಗ ಪ್ರತಿಯೊಂದು ಸಿಗ್ನಲ್ ಹಾಗೂ ಪೆಟ್ರೋಲ್ ಪಂಪ್ ಗಳಲ್ಲಿ ಇಲಾಖೆ ಸಿಸಿಟಿವಿ ಕ್ಯಾಮೆರಾ ಅನ್ನು ಅಳವಡಿಸಿದೆ.

 

advertisement

Image Source: India TV Hindi

 

ನಿಮ್ಮ ವಾಹನದ ನಂಬರ್ ಅನ್ನು ಪರಿಶೀಲಿಸುವ ಮೂಲಕ ನಿಮ್ಮ ಪಿಯುಸಿ ಸರ್ಟಿಫಿಕೇಟ್ (PUC Certificate) ಇದೆಯೋ ಇಲ್ಲವೋ ಅಥವಾ ನವೀಕರಿಸಲ್ಲವೋ ಎನ್ನುವಂತಹ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದ್ದು ಅದರ ಅನ್ವಯ ಕೂಡ ನಿಮ್ಮ ವಾಹನದ ಮೇಲೆ ಫೈನ್ ಹಾಕಬಹುದಾಗಿದೆ. ಕ್ಯಾಮೆರಾ ನಿಮ್ಮ ವಾಹನದ ಮೇಲೆ ಇ-ಚಲನ್ ಮೂಲಕ ದಂಡವನ್ನು ವಿಧಿಸಲಿದೆ. ಒಮ್ಮೆ ಪಿಯುಸಿ ಸರ್ಟಿಫಿಕೇಟ್ ಮಾಡಿದರೆ ಅದು ಒಂದು ವರ್ಷಗಳವರೆಗೆ ವ್ಯಾಲಿಡ್ ಆಗಿರುತ್ತದೆ.

 

Image Source: The Hindu

 

ಇದನ್ನು ತಯಾರಿಸುವಂತಹ ಶುಲ್ಕ ಬೇರೆ ವಾಹನಗಳಿಗೆ ನೂರು ರೂಪಾಯಿ ಆಗಿದ್ರೆ ದ್ವಿಚಕ್ರ ವಾಹನಗಳಿಗೆ ಕೇವಲ 70ರಿಂದ 80 ಆಗಿರುತ್ತದೆ. ಹೀಗಾಗಿ ಕೇವಲ 70 ರಿಂದ 80 ರೂಪಾಯಿಗಳ ವರೆಗೆ ಇರುವಂತಹ ಈ ಖರ್ಚಿಗಾಗಿ ನೀವು ಪಿಯುಸಿ ಸರ್ಟಿಫಿಕೇಟ್ (PUC Certificate) ಅನ್ನು ಮಾಡಿಸದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಒಂದು ವೇಳೆ ನಿಮ್ಮ ವಾಹನವನ್ನು ಟ್ರಾಫಿಕ್ ಪೊಲೀಸ್ (RTO Police) ಹಿಡಿದರೆ ಆ ಸಂದರ್ಭದಲ್ಲಿ 10,000 ಹಣವನ್ನು ಖರ್ಚು ಮಾಡುವುದಕ್ಕೆ ಹೋಗಬೇಕಾದ ಅಗತ್ಯವಿಲ್ಲ.

ಹೀಗಾಗಿ ಡ್ರೈವಿಂಗ್ ಲೈಸೆನ್ಸ್ (Driving License) ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಹಾಗೂ HSRP Number Plate ರೀತಿನೇ ಪಿಯುಸಿ ಸರ್ಟಿಫಿಕೇಟ್ ಕೂಡ ವಾಹನದಲ್ಲಿ ಇರಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ ಎಂಬುದನ್ನು ನೀವು ಈ ಸಂದರ್ಭದಲ್ಲಿ ತಿಳಿದುಕೊಳ್ಳಬೇಕಾಗಿರುತ್ತದೆ. ತಪ್ಪದೇ ಈ ಕೆಲಸವನ್ನು ಮಾಡಿ ಹಾಗೂ ದೊಡ್ಡ ಮಟ್ಟದ ದಂಡದಿಂದ ತಪ್ಪಿಸಿಕೊಳ್ಳಿ.

advertisement

Leave A Reply

Your email address will not be published.