Karnataka Times
Trending Stories, Viral News, Gossips & Everything in Kannada

Fan: ನಿಮ್ಮ ಮನೆಯಲ್ಲಿರುವ ಫ್ಯಾನ್ನಿಂದ ಸರಿಯಾದ ಗಾಳಿ ಬರ್ತಿಲ್ವಾ? ಹಾಗಾದ್ರೆ ಕೇವಲ ₹70 ಖರ್ಚು ಮಾಡಿ ಫ್ಯಾನ್ ಹೊಸದರಂತೆ ಕೆಲಸ ಮಾಡುತ್ತೆ!

advertisement

ಕಳೆದ ಕೆಲವು ತಿಂಗಳಿನಿಂದ ಮೈ ಸುಡುವ ಬೇಸಿಗೆಕಾಲ ಶುರುವಾಗಿದೆ ಪ್ರತಿಯೊಬ್ಬರ ಮನೆಯಲ್ಲಿಯೂ 24 ಗಂಟೆಗಳ ಕಾಲ ಫ್ಯಾನ್ (Fan) ಓಡುತ್ತಲೇ ಇರಬೇಕು. ಆದರೆ ಕೆಲವರ ಮನೆಯಲ್ಲಿರುವಂತಹ ಫ್ಯಾನ್ ಹಳೆಯದಾಗುತ್ತಾ ಹೋದಂತೆ ಅದರ ಸ್ಪೀಡ್ ತುಂಬಾ ಕಡಿಮೆಯಾಗಿರುತ್ತದೆ (Speed Will Be Reduced) ಇದರಿಂದ ಸರಿಯಾದ ಗಾಳಿ ಬರುವುದಿಲ್ಲ.

ನೀವು ಕೂಡ ಈ ರೀತಿಯಾದ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಕೇವಲ 70 ರೂಪಾಯಿ ಹಣವನ್ನು ಖರ್ಚು ಮಾಡಿ ನಾವು ತಿಳಿಸುವ ವಸ್ತು ಒಂದನ್ನು ಖರೀದಿಸಿ ಫ್ಯಾನ್ (Fan) ನಲ್ಲಿ ಅಳವಡಿಕೆ ಮಾಡಿದರೆ ಫ್ಯಾನ್ಸ್ ಹೊಸದರಂತೆ ಕೆಲಸ ಮಾಡುತ್ತದೆ.

ಸಾಮಾನ್ಯವಾಗಿ ಫ್ಯಾನ್ ಖರೀದಿಸಿದ ಆರಂಭಿಕ ದಿನಗಳಲ್ಲಿ ಬಹಳ ಸ್ಪೀಡ್ ಆಗಿ ಓಡುವುದರ ಜೊತೆಗೆ ತಣ್ಣನೆಯ ಗಾಳಿ (Cool Air) ಕೂಡ ಬರುತ್ತಿರುತ್ತದೆ. ಆದರೆ ಫ್ಯಾನ್ ಹಳೆಯದಾಗುತ್ತಾ ಹೋದಂತೆ ಅದರ ಕಾರ್ಯಕ್ಷಮತೆ ಕೂಡ ಕಡಿಮೆಯಾಗುತ್ತದೆ ಇದಕ್ಕೆ ಮುಖ್ಯ ಕಾರಣ ಫ್ಯಾನ್ ನಲ್ಲಿ ಅಳವಡಿಕೆ ಮಾಡಲಾಗಿರುವ ಕಂಡೆನ್ಸರ್. ಇವು ಫ್ಯಾನ್ಗಳನ್ನು ಸ್ಪೀಡ್ ಅಥವಾ ಸ್ಲೋ ಮಾಡಲು ಸಹಕರಿಸುತ್ತದೆ. ಫ್ಯಾನ್ನಲ್ಲಿ ಇರುವಂತಹ ಕಂಡೆನ್ಸರ್ಗಳು (Condenser) ಹಳೇದಾಗುತ್ತ ಹೋದಂತೆ ನಿಮ್ಮ ಫ್ಯಾನಿನ ಕಾರ್ಯಕ್ಷಮತೆ ಕೂಡ ಕಡಿಮೆಯಾಗುತ್ತದೆ.

ಫ್ಯಾನ್ ತಿರುಗಲು ಕಂಡೆನ್ಸರ್ ಅಗತ್ಯ:

 

advertisement

Image Source: Quora

 

ಈ ಕಂಡೆನ್ಸರ್ (Condenser) ಗಳಲ್ಲಿ ವಿದ್ಯುತ್ ಶಕ್ತಿಯನ್ನು ಸಂಗ್ರಹಿಸುವ (Stores Electrical Energy) ಸಾಮರ್ಥ್ಯವಿದ್ದು, ಫ್ಯಾನ್ (Fan) ನಲ್ಲಿ ಹಾಕಲಾಗಿರುವ ಮೋಟಾರ್ಗಳು ಎಂದಿಗೂ ತಂತಾನೆ ತಿರುಗುವುದಿಲ್ಲ ಅದಕ್ಕೆ ಈ ಕಂಡೆನ್ಸರ್ಗಳ ಸಹಾಯ ಬೇಕು. ನೀವೇ ಕೆಲವೊಮ್ಮೆ ಗಮನಿಸಿರುವ ಹಾಗೆ ಫ್ಯಾನಿನ ಸ್ವಿಚ್ ಹಾಕಿದರೂ ಅದು ತಿರುಗದಿರುವುದನ್ನು ಗಮನಿಸಿರುತ್ತೀರಾ ಆನಂತರ ಮರದ ಕಡ್ಡಿಯನ್ನು ಬಳಸಿ ಅದನ್ನು ತಿರುಗಿಸುವ ಪ್ರಯತ್ನ ಮಾಡಿದ ಬಳಿಕ ಫ್ಯಾನ್ ಕೆಲಸ ಮಾಡಲು ಪ್ರಾರಂಭಿಸುತ್ತದೆ‌. ಇದೇ ರೀತಿಯ ಕೆಲಸವನ್ನು ಈ ಕಂಡೆನ್ಸರ್ಗಳು ಮಾಡುತ್ತವೆ.

ಹೀಗೆ ಮಾಡಿದ್ರೆ ಹಳೆಯ ಹೊಸದನಂತೆ ಕೆಲಸ ಮಾಡುತ್ತೆ!

ಫ್ಯಾನ್ (Fan) ನಲ್ಲಿ ಅಳವಡಿಕೆ ಮಾಡಲಾಗಿರುವಂತಹ ಮೋಟಾರ್ (Motors) ಗಳು ಎಂದಿಗೂ ತಂತಾನೆ ತಿರುಗಲು ಸಹಕರಿಸುವುದಿಲ್ಲ, ಈ ಕಾರಣದಿಂದ ಫ್ಯಾನ್ಲಿನ ರೆಕ್ಕೆಗಳಿಗೆ ತಿರುಗುವ ಶಕ್ತಿಯನ್ನು ನೀಡುವ ಕಂಡೆನ್ಸರ್ಗಳನ್ನು ಅಳವಡಿಸಿರುತ್ತಾರೆ. ಫ್ಯಾನ್ ತಯಾರು ಮಾಡುವ ಸಂದರ್ಭದಲ್ಲಿ ಅಳವಡಿಸಲಾಗುವ ಕಂಡೆನ್ಸರ್ಗಳು ಕಾಲಕ್ರಮೇಣ ತುಂಬಾ ಹಳೆಯದಾದ ಮೇಲೆ ಸರಿಯಾಗಿ ಕೆಲಸ ಮಾಡುವುದಿಲ್ಲ ಅಂತಹ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಕೇವಲ 70 ರೂಪಾಯಿಗಳಿಗೆ ಲಭ್ಯವಿರುವಂತಹ 2.5 ಮೈಕ್ರೋಫರಡ್ ಕಂಡೆನ್ಸರ್ (2.5 Microfarad Condenser) ಗಳನ್ನು ತಂದು ಎಲೆಕ್ಟ್ರಿಷಿಯನ್ ಗಳ ಸಹಾಯ ಪಡೆದು ಅಳವಡಿಸುವುದರಿಂದ ನಿಮ್ಮ ಫ್ಯಾನ್ ಹೊಸದರಂತೆ ಅದ್ಭುತವಾಗಿ ಕೆಲಸ ಮಾಡುತ್ತದೆ.

advertisement

Leave A Reply

Your email address will not be published.