Karnataka Times
Trending Stories, Viral News, Gossips & Everything in Kannada

RTO: ಬೈಕ್ ಹಾಗು ಕಾರು ಇರುವ ಎಲ್ಲರಿಗೂ RTO ಧೀಡಿರ್ ಆದೇಶ! HSRP ಗೂ ಮುನ್ನ ಇಂತಹವರ ಮೇಲೆ ಕಾರ್ಯಾಚರಣೆ

advertisement

ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕಾರುಗಳಲ್ಲಿ ಕೂಡ ವೈಟ್ ಹೆಡ್ಲೈಟ್ ಅನ್ನು ಅಳವಡಿಸುವಂತಹ ಟ್ರೆಂಡ್ ಹೆಚ್ಚಾಗಿದೆ. ಸಾಕಷ್ಟು ಜನರು ಖರೀದಿಸಿದ ನಂತರ ಎಕ್ಸ್ಟ್ರಾ ಫಿಟ್ಟಿಂಗ್ ರೂಪದಲ್ಲಿ ಇದನ್ನು ಅಳವಡಿಸಿಕೊಳ್ಳುತ್ತಾರೆ. ಇನ್ನು ಕೆಲವು ವಾಹನಗಳಲ್ಲಿ ಖರೀದಿಸುವಾಗಲೇ ಇದು ಸಿಗುತ್ತದೆ. ಇನ್ನು ನಮ್ಮ ಭಾರತ ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿರುವಂತಹ ಗುಜರಾತ್ ನಲ್ಲಿ ಸಾಮಾನ್ಯವಾಗಿ ಕಾರುಗಳಲ್ಲಿ ಸಿಗುವಂತಹ ಹಳದಿ ಬಣ್ಣದ ಹೆಡ್ ಲೈಟ್ ಅನ್ನು ತೆಗೆದು ಬಿಳಿ ಬಣ್ಣದ ಅನಧಿಕೃತ ಹೆಡ್ ಲೈಟ್ ಅನ್ನು ಅಳವಡಿಸುವುದು ಕಾನೂನಾರ್ಹ ಅಪರಾಧ ಎಂಬುದಾಗಿ ಘೋಷಣೆ ಮಾಡಿದೆ.

ಗುಜರಾತಿನ ಸಾರಿಗೆ ಇಲಾಖೆ ಅಧಿಕೃತವಾಗಿ ಹೊರಡಿಸಿರುವಂತಹ ನಿಯಮಗಳ ಪ್ರಕಾರ ಇನ್ಮುಂದೆ ಯಾರೇ ಆಗಲಿ ವಾಹನಗಳಿಗೆ ಹೆಡ್ ಲೈಟ್ ನಲ್ಲಿ ಮಾಡಿಫಿಕೇಶನ್ ಮಾಡಿಸಿದಲ್ಲಿ ಅವರು ಶುಲ್ಕವನ್ನು ಕಟ್ಟಬೇಕಾಗುತ್ತದೆ ಎಂಬುದಾಗಿ ಹೇಳಲಾಗಿದೆ. RTO ಜಾರಿಗೆ ತಂದಿರುವಂತಹ ಅಭಿಯಾನದಲ್ಲಿ ಇನ್ಮುಂದೆ ಈ ರೀತಿಯ ಅನಧಿಕೃತವಾಗಿರುವಂತಹ ವೈಟ್ ಹೆಡ್ ಲೈಟ್ ಗಳನ್ನು ಬಳಸುವ ಅಥವಾ ಹೊಸದಾಗಿ ಅಳವಡಿಸುವಂತಹ ವಾಹನಗಳನ್ನು ಹಿಡಿದು ಫೈನ್ ಹಾಕಲಾಗುತ್ತದೆ. ಈ ವಿಚಾರದ ಬಗ್ಗೆ ಸಾರಿಗೆ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು ಕಟ್ಟುನಿಟ್ಟಿನ ನಿಯಮಗಳನ್ನು ಕೂಡ ಈಗಾಗಲೇ ಜಾರಿಗೆ ತಂದಿದೆ.

Image Source: Shutterstocks

advertisement

ಯಾಕೆ ಈ ನಿಯಮ ಜಾರಿಗೆ ಬಂದಿರುವುದು?

ಈ ರೀತಿ ಕಣ್ಣು ಕುಕ್ಕುವಂತಹ ಮಾಡಿಫಿಕೇಶನ್ ಮಾಡಿದಂತಹ ವೈಟ್ ಹೆಡ್ ಲೈಟ್ ಗಳನ್ನು ವಾಹನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಎದುರುಗಡೆಯಿಂದ ಬರುವಂತಹ ವಾಹನದ ಚಾಲಕರಿಗೆ ವಾಹನವನ್ನು ಚಲಾಯಿಸುವುದಕ್ಕೆ ಕಷ್ಟ ಮಾಡಬಹುದು ಹಾಗೂ ಅದರಿಂದ ಅಪಘಾತಕ್ಕೆ ಈಡಾಗುವಂತಹ ಸಾಧ್ಯತೆ ದಟ್ಟವಾಗಿದೆ ಎನ್ನುವ ಕಾರಣಕ್ಕಾಗಿ ಈ ನಿಯಮಗಳನ್ನು ಜಾರಿಗೆ ತರಲಾಗಿದೆ.

ಇದು ಕೇವಲ ಸಾಮಾನ್ಯ ನಗರ ಹಾಗೂ ಹಳ್ಳಿ ಭಾಗಗಳಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕೂಡ ಹೆಚ್ಚಾಗಿ ಬಳಸುವಂತಹ ಪ್ರಕರಣಗಳು ಕಂಡುಬರುತ್ತದೆ. ಇದೇ ಕಾರಣಕ್ಕಾಗಿ ಹೆದ್ದಾರಿಗಳಲ್ಲಿ ಹೆಚ್ಚಾಗಿ ಆ-ಕ್ಸಿಡೆಂಟ್ ಆಗುವಂತಹ ಪ್ರಕರಣಗಳು ಕೂಡ ಕಂಡುಬರುತ್ತಿವೆ. ಈ ರೀತಿ ಅನಧಿಕೃತವಾಗಿ ಅಳವಡಿಸಿಕೊಳ್ಳುವಂತಹ ಎಲ್ಇಡಿ ಲೈಟ್ಸ್ ಗಳು ಈ ತರಹದ ಪ್ರಕರಣಗಳಿಗೆ ಕಾರಣವಾಗುತ್ತಿವೆ ಎನ್ನುವುದಾಗಿ ತಿಳಿದು ಬಂದಿದ್ದು ಇದೇ ಕಾರಣಕ್ಕಾಗಿ ಈ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ಸಾರಿಗೆ ಇಲಾಖೆಯ ಕಮಿಷನರ್ ಜಾರಿಗೆ ತಂದಿದ್ದಾರೆ. ಈ ರೀತಿ ಅನಧಿಕೃತ ಹೆಡ್ ಲೈಟ್ ಗಳನ್ನು ಮಾರಾಟ ಕೂಡ ಮಾಡಬಾರದು ಎನ್ನುವುದಾಗಿ ತಾಕಿತು ಮಾಡಲಾಗಿದೆ. ಕೇವಲ ಗುಜರಾತ್ ಮಾತಲ್ಲದೇ ಈ ತರಹದ ಪ್ರಕರಣಗಳು ಕರ್ನಾಟಕದಲ್ಲಿ ಕೂಡ ಕಂಡು ಬರುತ್ತಿದ್ದು ಮುಂದಿನ ದಿನಗಳಲ್ಲಿ ಈ ನಿಯಮವನ್ನು ಕರ್ನಾಟಕದಲ್ಲಿ ಕೂಡ ಜಾರಿಗೆ ತಂದರು ಆಶ್ಚರ್ಯ ಪಡಬೇಕಾಗಿಲ್ಲ.

advertisement

Leave A Reply

Your email address will not be published.