Karnataka Times
Trending Stories, Viral News, Gossips & Everything in Kannada

KSRTC: KSRTC ವಾಹನ ಚಾಲಕರಿಗೆ ಬೆಳ್ಳಂಬೆಳಿಗ್ಗೆ ಬಿಗ್ ಅಪ್ಡೇಟ್! ಸರ್ಕಾರದ ಘೋಷಣೆ

advertisement

KSRTC ವಾಹನ ಚಾಲಕರಿಗೆ ಕೆಲಸದ ಒತ್ತಡ ಹೆಚ್ಚಾಗುತ್ತಿದೆ ಅನ್ನೊ ಮಾತು ಕೇಳಿ ಬರುತ್ತಿದೆ. ಸರಕಾರದ ವಾಹನ ಕಡಿಮೆ ಇದ್ದು ಟ್ರಿಪ್ ಅಧಿಕವಾಗಿದೆ ಹೀಗಾಗಿ ಚಾಲಕರಿಗೆ ಸರಿಯಾಗಿ ವಿಶ್ರಾಂತಿ ಕೂಡ ಸಿಗುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದ್ದು ಈ ಹಿನ್ನೆಲೆಯಲ್ಲಿ ಹೊಸದೊಂದು ಕ್ರಮ ಜಾರಿಗೆ ತರುವ ಮೂಲಕ KSRTC ವಾಹನ ಸವಾವರಿಗೆ ಸಂತಸದ ವಿಚಾರ ಒಂದು ತಿಳಿದು ಬಂದಿದೆ.

ಯಾವುದು ಈ ವಿಚಾರ

ಇತ್ತೀಚಿನ ದಿನದಲ್ಲಿ ಸಿಬ್ಬಂದಿಯ ಕೊರತೆಯಿಂದಾಗಿ KSRTC ವಾಹನ ಚಾಲಕರಿಗೆ ಹೆಚ್ಚುವರಿ ಹೊರೆ ನೀಡಲಾಗುತ್ತಿದೆ. ಡಬಲ್ ಡ್ಯೂಟಿ ನೀಡಿ ವಿಶ್ರಾಂತಿ ರಹಿತ ಜೀವನಕ್ಕೆ ಈ ವಿಧಾನ ಕಾರಣವಾಗಿದ್ದು ಅನೇಕ ಕಡೆ ಸರಕಾರಿ ಬಸ್ ಅಪಘಾತ ಆಗಲು ಈ ವಿಶ್ರಾಂತಿ ರಹಿತ ವಾಹನ ಚಾಲನೆಯೇ ಮುಖ್ಯ ಕಾರಣವಾಗಿದೆ ಎಂಬುದು ತಿಳಿದುಬಂದಿದೆ. ಹಾಗಾಗಿ ಈ ಡಬಲ್ ಡ್ಯುಟಿ ವ್ಯವಸ್ಥೆಯಿಂದ ಮುಕ್ತಿ ಸಿಗುತ್ತಿದೆ.

ಈ ನಿಯಮ ಜಾರಿ ಇರಲಿದೆ

ಮಾರ್ಚ್ 28 ರಂದು ಹೊಸ ನಿಯಮ ಜಾರಿಯಾಗಲಿದ್ದು ಅದರ ಪ್ರಕಾರ KSRTC ಬಸ್ ಚಾಲಕರಿಗೆ ಎಂಟು ಗಂಟೆಗಿಂತ ಅಧಿಕ ಕೆಲಸ ಮಾಡುವುದು ಮತ್ತು ರಾತ್ರಿ ಕೆಲಸ ಮಾಡಿದವರಿಗೆ ಕಡ್ಡಾಯವಾಗಿ ವಿಶ್ರಾಂತಿ ಘೋಷಣೆ ಮಾಡಲಾಗಿದೆ. ಈ ಮೂಲಕ ವಿಶ್ರಾಂತಿ ಕಡ್ಡಾಯ ಮಾಡಲಾಗುತ್ತಿದ್ದು ದೂರದೂರಿನಲ್ಲಿ ಪ್ರಯಾಣ ಮಾಡುವವರು ಹಾಗೂ ರಾತ್ರಿ ಪ್ರಯಾಣ ಮಾಡುವ ವಾಹನ ಚಾಲಕರಿಗೆ ವಿಶ್ರಾಂತಿ ಕಡ್ಡಾಯವಾಗಿ ಸಿಗಲಿದೆ.

advertisement

Image Source: The Hans India

KSRTC ಉದ್ದೇಶ ಏನು?

ಇತ್ತೀಚಿನ ದಿನದಲ್ಲಿ KSRTC ಬಸ್ ವಾಹನ ಅಪಘಾತದ ಸಂಖ್ಯೆ ಹೆಚ್ಚಾಗುತ್ತಿದೆ ಹಾಗಾಗಿ ಅದನ್ನು ತನಿಖೆ ಮಾಡಲು ಸಮಿತಿ ರಚನೆ ಮಾಡಿದ್ದು ಅದರ ಮೂಲಕ ವರದಿ ಮಂಡಿಸಲಾಗಿದೆ. ನಿದ್ದೆ ಕಡಿಮೆಯಾಗಿ ಬಸ್ ಚಲಾಯಿಸುವುದು ಅಪಾಯ ಕಾರಿ ಎಂಬುದು ತಿಳಿದು ಬಂದಿದ್ದು ಅಪಘಾತಕ್ಕೆ ವಿಶ್ರಾಂತಿ ಇಲ್ಲದಿರುವುದೇ ಮೂಲ ಕಾರಣವಾಗುತ್ತಿದೆ ಎಂಬುದು ಸಹ ತಿಳಿದು ಬಂದಿದೆ. ಸದ್ಯ KSRTC ಬಸ್ ನಲ್ಲಿ ಚಾಲಕರಿಗೆ ಡಬಲ್ ಡ್ಯುಟಿ ಹೊರೆ ಕಡಿಮೆ ಮಾಡಲಾಗುತ್ತಿದೆ ಎಂಬುದು ತಿಳಿದು ಬಂದಿದೆ. ಈ ಕಾರಣಕ್ಕಾಗಿ ಬಸ್ ಅಪಘಾತ ಪ್ರಮಾಣ ಕಡಿಮೆ ಮಾಡಬೇಕು ಎಂಬ ಉದ್ದೇಶದಿಂದ ಹಾಗೂ ವಾಹನ ಚಾಲಕರಿಗೆ ಆರೋಗ್ಯದ ದೃಷ್ಟಿಯಿಂದ ಕೂಡ ವಿಶ್ರಾಂತಿ ಅಗತ್ಯ ಮನಗಂಡು ಈ ನಿರ್ಣಯಕ್ಕೆ ಬರಲಾಗಿದೆ.

ವಾರದಲ್ಲಿ ಇಂತಿಷ್ಟು ಗಂಟೆ ಕೆಲಸ

KSRTC ವಾಹನ ಚಾಲಕರಿಗೆ ವಾರದಲ್ಲಿ ಕೆಲಸದ ಅವಧಿಯನ್ನು ಇಂತಿಷ್ಟು ಗಂಟೆ ಮಾತ್ರ ನೀಡಬೇಕು ಎಂಬ ನಿಯಮ ಇದೆ. ವಾರದಲ್ಲಿ 48ಗಂಟೆಗೂ ಮೀರಿ ಕೆಲಸ ಮಾಡಿಸುವಂತಿಲ್ಲ. ಎಂಟು ಗಂಟೆಗಿಂತ ಅಧಿಕ ಕೆಲಸ ಮಾಡಿದವರಿಗೆ 4ರಿಂದ 5 ಗಂಟೆ ವಿಶ್ರಾಂತಿ ಕಡ್ಡಾಯ ಮಾಡಲಾಗಿದೆ. ಹಾಗಾಗಿ ಇನ್ನು ಮುಂದೆ ವಾಹನ ಚಾಲಕರಿಗೆ ರಿಲ್ಯಾಕ್ಸ್ ಆಗಲಿದೆ ಎಂದರೂ ತಪ್ಪಾಗದು.

advertisement

Leave A Reply

Your email address will not be published.