Karnataka Times
Trending Stories, Viral News, Gossips & Everything in Kannada

WhatsApp: ನಿಮ್ಮ ವಾಟ್ಸಾಪ್ ಬೇರೆ ಯಾರಾದ್ರೂ ಬಳಸುತ್ತಿದ್ದರೆ ಈ ರೀತಿಯಾಗಿ ಪತ್ತೆ ಹಚ್ಚಬಹುದು!

advertisement

ವಾಟ್ಸಾಪ್ ಬಹಳಷ್ಟು ಮಂದಿಯ ನೆಚ್ಚಿನ ಸಂಪರ್ಕ ಮಾಧ್ಯಮ ಆಗಿದೆ. ಸಂದೇಶಗಳಿರಲಿ ಕರೆಗಳೇ ಇರಲಿ ಹಲವಾರು ಮಂದಿ ಇಂದು ವಾಟ್ಸಾಪ್ ಅನ್ನು ಬಳಸುತ್ತಾರೆ. ಸ್ಮಾರ್ಟ್ ಫೋನ್ ಎಂದಾದ ಮೇಲೆ ಅದರಲ್ಲಿ ವಾಟ್ಸಪ್ ಇಲ್ಲ ಎಂದು ಆಗುವ ಸನ್ನಿವೇಶಗಳು ಬಹಳ ಕಡಿಮೆ ಇರಬಹುದು. ಆ ಪ್ರಮಾಣಕ್ಕೆ ವಾಟ್ಸಪ್ (WhatsApp) ಇಂದು ಪ್ರಖ್ಯಾತವಾಗಿದೆ ಹಾಗೂ ಸ್ಮಾರ್ಟ್ ಫೋನ್ ನ ಬೇಸಿಕ್ ನೀಡ್ ಎನ್ನುವಂತಾಗಿದೆ.

ವಾಟ್ಸಪ್ (WhatsApp) ನಲ್ಲಿ ಡೇಟಾ ಎನ್ಕ್ರಿಪ್ಷನ್ (Data Encryption) ಇರುತ್ತದೆ ಇದು ಎಂಡ್ ಟು ಎಂಡ್ ಎನ್ಕ್ರಿಪ್ಷನ್ (End to End Encryption) ಆಗಿದ್ದು ಕೇವಲ ಯಾರು ಸಂದೇಶ ಕಳಿಸುತ್ತಾರೆ ಹಾಗೂ ಯಾರು ಸಂದೇಶವನ್ನು ಸ್ವೀಕರಿಸುತ್ತಾರೆ ಅವರು ಮಾತ್ರ ಆ ಸಂದೇಶವನ್ನು ನೋಡಬಹುದು ಎಂದು ಈ ಟೆಕ್ನಾಲಜಿ ಹೇಳುತ್ತದೆ. ಆದರೆ ನಿಜವಾಗಿ ನಮ್ಮ ಎಲ್ಲಾ ಡೇಟಾಗಳು ಸುರಕ್ಷಿತ ಆಗಿರುತ್ತವೆಯೇ ?

 

Pegasus Spyware:

advertisement

ಪೆಗಸಸ್ (Pegasus) ಎನ್ನುವ ಸ್ಪೈವೇರ್ ಅನ್ನು ನೀವು ಕೇಳಿರಬಹುದು. ಇದರ ಚರ್ಚೆ ಹಲವಾರು ಬಾರಿ ನಡೆದಿದೆ. ಇದು ನಮ್ಮ ಮೊಬೈಲ್ ನಲ್ಲಿ ನಮಗೆ ತಿಳಿಯದಂತೆ ಇದ್ದು ನಮ್ಮ ವಾಟ್ಸಾಪ್ (WhatsApp) ಡೇಟಾವನ್ನು ರೀಡ್ ಮಾಡುತ್ತದೆ ಎಂದು ಹೇಳಲಾಗುತ್ತಿತ್ತು ಹಾಗಾದರೆ ಈ ಪೆಗಸಸ್ ಸ್ಪೈವೇರಿನಿಂದ ನಮಗೆ ರಕ್ಷಣೆ ಹೇಗೆ ಸಿಗುತ್ತದೆ.

ಕ್ಯಾಸ್ಪ್ರ್ ಸ್ಕೈ ನ ಗ್ಲೋಬಲ್ ರಿಸರ್ಚ್ ಅಂಡ್ ಅನಾಲಿಸಿಸ್ (Casper Sky’s Global Research and Analysis) ಟೀಮ್ ಈಗ ನಿಮ್ಮ ಮೊಬೈಲ್ ನಲ್ಲಿ ಇಂತಹ ಯಾವುದಾದರೂ ಸಾಫ್ಟ್ವೇರ್ ಇದೆಯೇ ಹಾಗೂ ಇದ್ದಲ್ಲಿ ಅದನ್ನು ನೀವೇ ಮನೆಯಲ್ಲಿ ಹೇಗೆ ಪರೀಕ್ಷಿಸಬಹುದು ಎಂಬುದನ್ನು ಹೇಳಿಕೊಡುತ್ತಿದೆ. ಐಫೋನ್ ಮೊಬೈಲ್ನಲ್ಲಿ ಕೂಡ ಇಂತಹ ಸ್ಪೈವೇರ್ ಇದೆಯೇ ತಿಳಿದುಕೊಳ್ಳಬಹುದಾಗಿದೆ.

ಕ್ಯಾಸ್ಪರ್ ಸ್ಕೈ ನಾ ತಜ್ಞರ ಪ್ರಕಾರ ಪೆಗಸಸ್ ಒಂದು ವೇಳೆ ನಮ್ಮ ಮೊಬೈಲ್ ನಲ್ಲಿ ಇದ್ದಲ್ಲಿ ಇದರ ಮಾಹಿತಿ ಅನ್ಕನ್ವೆನ್ಷನಲ್ ಸಿಸ್ಟಮ್ ಲಾಗ್ ಶಟ್ ಡೌನ್ ಲೋಗ್ (Shutdown Log) ನಲ್ಲಿ ಸಿಗುತ್ತದೆ ಐ ಓ ಎಸ್ ಮೊಬೈಲ್ಗಳಲ್ಲಿ ಸಿಸ್ ಡಯಾಗ್ನೋಸ್ ಆರ್ಕೈವ್ (Sysdiagnose Archive) ನ ಒಂದು ಭಾಗವಾಗಿ ಇರುತ್ತದೆ. ಇದು ಪ್ರತಿಯೊಂದು ರಿಬೂಟ್ ನ ಡೇಟಾವನ್ನು ಹೊಂದಿರುತ್ತದೆ. ಇಲ್ಲಿ ಪೆಗಾಸಸ್ ನ ಕಡೆಯಿಂದ ಯಾವುದೇ ಚಟುವಟಿಕೆಗಳು ನಮ್ಮ ಮೊಬೈಲ್ ನಲ್ಲಿ ನಡೆದರೆ ಅದರ ಮಾಹಿತಿ ಸಿಗುತ್ತದೆ.

ಸ್ವಿಚ್ ಆಫ್ ಮಾಡುವುದು ಒಂದು ದಾರಿ:

ನಿಮ್ಮ ಮೊಬೈಲ್ ನಲ್ಲಿ ಇಂತಹ ಅನಪೇಕ್ಷಿತ ಸಾಫ್ಟ್ವೇರ್ ಗಳನ್ನು ಡಿಲೀಟ್ ಮಾಡುವ ಸಿಸ್ಟಮ್ ಈಗಾಗಲೇ ಇರುತ್ತದೆ. ಯಾವುದೇ ಅನಪೇಕ್ಷಿತ ಸಾಫ್ಟ್ ವೇರ್ ಬಹಳ ಸಮಯ ನಿಮ್ಮ ಮೊಬೈಲ್ ನಲ್ಲಿ ಇರಲು ಸಾಧ್ಯವಿಲ್ಲ. ಇದಕ್ಕಾಗಿ ನೀವು ನಿಮ್ಮ ಮೊಬೈಲ್ ಗಳನ್ನು ಆಗಾಗ ಸ್ವಿಚ್ ಆಫ್ ಮಾಡಿದಾಗ ಸ್ವಿಚ್ ಆನ್ ಮಾಡುವ ಸಮಯದಲ್ಲಿ ಈ ಅನಪೇಕ್ಷಿತ ಸಾಫ್ಟ್ವೇರ್ಗಳು ಇಲ್ಲ ವಾಗುತ್ತದೆ. ನೀವು ಐಒಎಸ್ ಬಳಕೆದಾರರಾಗಿದ್ದಲ್ಲಿ ಲಾಕ್ಡೌನ್ ಮೋಡ್‌ನ ಬಳಕೆಯನ್ನು ಕೂಡ ಮಾಡಬಹುದಾಗಿದೆ.

ಮೊಬೈಲ್ ಕಂಪನಿಯವರು ಇಂತಹ ಅನಪೇಕ್ಷಿತ ಸಾಫ್ಟ್ವೇರ್ ಗಳ ಬಗ್ಗೆ ಮಾಹಿತಿ ಹೊಂದಿದ್ದು ತಮ್ಮ ಅಪ್ಡೇಟ್ಗಳಲ್ಲಿ ಇದನ್ನು ನಮ್ಮ ಮೊಬೈಲ್ ನಿಂದ ತೆಗೆಯಲು ದಾರಿಗಳನ್ನು ಹುಡುಕುತ್ತಿರುತ್ತಾರೆ. ಹಾಗಾಗಿ ಪ್ರತಿ ಬಾರಿ ಹೊಸ ಅಪ್ಡೇಟ್ ಬಂದಾಗ ಅದನ್ನು ನಮ್ಮ ಮೊಬೈಲ್ ಗೆ ಅಪ್ಡೇಟ್ ಮಾಡಿಕೊಳ್ಳುವುದು ಇಂತಹ ಸಾಫ್ಟ್ವೇರ್ ಗಳಿಂದ ನಮ್ಮ ಮೊಬೈಲ್ ಅನ್ನು ಸುರಕ್ಷಿತಗೊಳಿಸುವ ದಾರಿಯಾಗಿದೆ.

advertisement

Leave A Reply

Your email address will not be published.