Karnataka Times
Trending Stories, Viral News, Gossips & Everything in Kannada

ಭಾರತದ ಈ ನಂಬರ್ 1 ಎಲೆಕ್ಟ್ರಿಕ್ ಕಾರಿನ ಮೇಲೆ ನೇರ 50 ಸಾವಿರ ಕ್ಯಾಶ್ ಡಿಸ್ಕೌಂಟ್! 465Km ಮೈಲೇಜ್

advertisement

Electric Cars: ಇತ್ತೀಚಿನ ದಿನಮಾನಗಳಲ್ಲಿ ಹಲವರ ಆಯ್ಕೆ ಎಲೆಕ್ಟ್ರಿಕ್ ಗಾಡಿಗಳೇ ಆಗಿವೆ, ಒಮ್ಮೆ ಚಾರ್ಜ್ ಮಾಡಿ ಊರೆಲ್ಲಾ ಬಹಳ ಆರಾಮದಾಯಕವಾಗಿ ಪ್ರಯಾಣಿಸಬಹುದಾದಂತಹ ಎಲೆಕ್ಟ್ರಿಕ್ ಕಾರುಗಳತ್ತ ಜನರು ಹೆಚ್ಚು ಆಕರ್ಷಿತರಾಗುತ್ತಿದ್ದು, ಈ ಕಾರಣದಿಂದ ಕಾರ್ ತಯಾರಿಕ ಕಂಪನಿಗಳು ವಿಶೇಷ ರೂಪಾಂತರಗಳ ಎಲೆಕ್ಟ್ರಿಕ್ ಕಾರ್ ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುತ್ತಲೇ ಇವೆ. ಅದರಂತೆ ಸದ್ಯ ಟಾಟಾ ಕಂಪನಿಯ(Tata Company) ನೆಕ್ಸಾನ್ ಎಲೆಕ್ಟ್ರಿಕ್ ವಾಹನವು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ನೀವೇನಾದರೂ ಏಪ್ರಿಲ್ ತಿಂಗಳಿನಲ್ಲಿ ಕಾರ್ ಖರೀದಿ ಮಾಡುವ ಯೋಜನೆಯಲ್ಲಿದ್ದರೆ ಅದ್ಭುತ ರಿಯಾಯಿತಿಯೊಂದಿಗೆ ಟಾಟಾ ನೆಕ್ಸನ್ ಇವಿ(Tata Nexon EV) ಯನ್ನು ಖರೀದಿಸಬಹುದು.

What is Tata Nexon EV discount offer?
Is there any subsidy on Tata Nexon EV?
Is Tata Nexon EV successful?
What are Nexon offers for March 2024?

ಟಾಟಾ ನೆಕ್ಸಾನ್ ಇವಿ ಮೇಲೆ ಬರೋಬ್ಬರಿ 50,000 ಆಕರ್ಷಕ ರಿಯಾಯಿತಿ

ಸ್ನೇಹಿತರೆ, ಟಾಟಾ ಕಂಪನಿ ಮಾರುಕಟ್ಟೆಗೆ ಪರಿಚಯಿಸಿರುವ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಮೇಲೆ ಅತ್ಯಾಕರ್ಷಕ ಕೊಡುಗೆಗಳನ್ನು ನೀಡುತ್ತಿದ್ದು, ಗ್ರೀನ್ ಬೋನಸ್(Green Bonus) ರೂಪದಲ್ಲಿ ಕ್ಯಾಶ್ ಡಿಸ್ಕೌಂಟ್(Cash Discount) ನೀಡುವುದರ ಜೊತೆಗೆ MY2023 ಕಾರುಗಳ ಸ್ಟ್ರಾಕ್ ಮೇಲೆ ಬರೋಬ್ಬರಿ 50,000 ಹಣವನ್ನು ಡಿಸ್ಕೌಂಟ್ ನೀಡುತ್ತಿದೆ. ಅಂದರೆ ಸೆಪ್ಟೆಂಬರ್ 2023-ಡಿಸೆಂಬರ್ 2023ರ ಅವಧಿಯಲ್ಲಿ ತಯಾರಾಗಿರುವ ಗಾಡಿಗಳ ಮೇಲೆ ಮಾತ್ರ ಈ ರಿಯಾಯಿತಿ ಸಿಗಲಿದೆ. ಆದರೆ ಈ ವರ್ಷ ತಯಾರು ಮಾಡಲಾಗಿರುವ ಟಾಟಾ ನೆಕ್ಸಾನ್ ಇವಿ ಮೇಲೆ ಯಾವುದೇ ರೀತಿಯ ರಿಯಾಯಿತಿ ಇರುವುದಿಲ್ಲ.

advertisement

ಟಾಟಾ ನೆಕ್ಸಾನ್ ರೂಪಾಂತರಗಳು:

ಮಧ್ಯಮ ರೇಂಜ್ ಮತ್ತು ಲಾಂಗ್ ರೇಂಜ್(Medium Range And Long Range) ಎಂಬ ಎರಡು ರೂಪಾಂತರಗಳಲ್ಲಿ ಟಾಟಾ ನೆಕ್ಸಾನ್ ಇವಿ ಲಭ್ಯವಿದ್ದು, ಮಧ್ಯಮ ರೇಂಜ್ ಬರೋಬ್ಬರಿ 325 km ನಷ್ಟು ಮೈಲೇಜ್ ನೀಡಿದ್ರೆ, ಲಾಂಗ್ ರೇಂಜ್ ವಾಹನವು 465 km ಮೈಲೇಜ್ ನೀಡುತ್ತದೆ. ಈ ಎರಡು ಕಾರುಗಳಿಗೆ 7.2kW AC ಸ್ಟ್ಯಾಂಡರ್ಡ್ ಚಾರ್ಚರ್(Standard Charger) ಇದ್ದು ಅತಿ ಕಡಿಮೆ ಅವಧಿಯಲ್ಲಿ ಬಹುಬೇಗ ಚಾರ್ಜ್ ಆಗುತ್ತದೆ.

What is Tata Nexon EV discount offer?Is there any subsidy on Tata Nexon EV?
Is Tata Nexon EV successful?
What are Nexon offers for March 2024?
Credit: India Today

ಟಾಟಾ ನೆಕ್ಸಾನ್ ಬೆಲೆ:

ಟಾಟಾ ಕಂಪನಿಯು ಅಕ್ಟೋಬರ್ ಮತ್ತು ಸೆಪ್ಟೆಂಬರ್ 2023 ರಲ್ಲಿ ತಯಾರು ಮಾಡಿರುವಂತಹ ವಾಹನಗಳ ಮೇಲೆ ಅತ್ಯಾಕರ್ಷಕ ರಿಯಾಯಿತಿಯನ್ನು ನೀಡುವುದರ ಜೊತೆಗೆ ಅಗ್ಗದ ಬೆಲೆಯಲ್ಲಿ ಕಾರನ್ನು ಮಾರಾಟ ಮಾಡಲು ಮುಂದಾಗಿದೆ. ಇಷ್ಟೆಲ್ಲ ಆಕರ್ಷಕ ವೈಶಿಷ್ಟತೆಗಳು ಹಾಗೂ ಮೈಲೇಜ್ ಸಾಮರ್ಥ್ಯವನ್ನು ಒಳಗೊಂಡಿರುವ ಟಾಟಾ ನೆಕ್ಸಾನ್ ಇವಿ, 14.49 ಲಕ್ಷದಿಂದ ಪ್ರಾರಂಭವಾಗಿ 19.29 ಲಕ್ಷದ ಬೆಲೆಗೆ ದೊರಕುತ್ತದೆ.

advertisement

Leave A Reply

Your email address will not be published.