Karnataka Times
Trending Stories, Viral News, Gossips & Everything in Kannada

Fixed Deposit: ಈ ಖಾಸಗಿ ಬ್ಯಾಂಕ್ ನಲ್ಲಿ FD ಇಟ್ಟವರಿಗೆ ಹೊಸ ಸೂಚನೆ! ನಿರ್ಧಾರ ಬದಲಿಸಿದ ಬ್ಯಾಂಕ್

advertisement

ಇತ್ತೀಚಿನ ದಿನಗಳಲ್ಲಿ ಹಲವಾರು ರೀತಿಯಾದಂತಹ ಉಳಿತಾಯವನ್ನು ಮಾಡುವಂತಹ ಸಲುವಾಗಿ ಎಲ್ಲರೂ ಬ್ಯಾಂಕಿನಲ್ಲಿ ಫಿಕ್ಸೆಡ್ ಡೆಪಾಸಿಟ್ ಇಡುವುದು ಸಾಮಾನ್ಯವಾಗಿದೆ. ಇನ್ನು ಫಿಕ್ಸೆಡ್ ಡೆಪಾಸಿಟ್ (Fixed Deposit) ಮಾಡುವಾಗ ಅದಕ್ಕೆ ಸಿಗುವಂತಹ ಬಡ್ಡಿಯ ಮೊತ್ತದ ಆಧಾರದ ಮೇಲೆ ಹೂಡಿಕೆದಾರರು ಹೂಡಿಕೆ ಮಾಡಿರುತ್ತಾರೆ. ಮತ್ತು ಬಹಳ ಸುರಕ್ಷಿತವಾಗಿ ಹೂಡಿಕೆ ಮಾಡಿರುವ ಹಣ ಇರುತ್ತದೆ ಎಂದು ಹೂಡಿಕೆದಾರರು ಭರವಸೆಯನ್ನು ಇಟ್ಟಿರುತ್ತಾರೆ. ಇನ್ನು ಬ್ಯಾಂಕ್ ಇಂದ ಬಡ್ಡಿಯ ದರ ಬದಲಾವಣೆ ಆಗುವ ದರದಲ್ಲಿ ಫಿಕ್ಸೆಡ್ ಡೆಪಾಸಿಟ್ ದರವು ವ್ಯತ್ಯಾಸ ಆಗುತ್ತದೆ.

ಇದೀಗ ಖಾಸಗಿ ವಲಯದ IDFC Bank ಸ್ಥಿರ ಠೇವಣಿ (Fixed Deposit)ಬಡ್ಡಿ ದರಗಳನ್ನು ಪರಿಷ್ಕರಿಸಿದೆ. ಮತ್ತು ಇದರಿಂದ ಫಿಕ್ಸೆಡ್ ಡೆಪಾಸಿಟ್ ದರಗಳಲ್ಲಿ ಬದಲಾವಣೆ ಆಗಿರಬಹುದಾಗಿದೆ. ಇದು ಮಿಕ್ಕ ಬ್ಯಾಂಕ್ ಗಳ ಮೇಲೆ ಕೂಡ ಪ್ರಭಾವ ಬೀರುತ್ತದೆ. ಇನ್ನು IDFC ಬ್ಯಾಂಕ್ ಬಡ್ಡಿ ದರವನ್ನು ಪರಿಷ್ಕೃತ ಮಾಡಿದ ಬಳಿಕ ಇದೀಗ ಬದಲಾದ ದರಗಳನ್ನು ಸಂಬಂಧ ಪಟ್ಟ ಬ್ಯಾಂಕ್ ಬಿಡುಗಡೆ ಮಾಡಿದೆ. ಪ್ರಸ್ತುತ ಬ್ಯಾಂಕ್ ಗಳು ಗ್ರಾಹಕರಿಗೆ 7 ದಿನಗಳಿಂದ 10 ವರ್ಷಗಳವರೆಗೆ ಎಫ್‌ಡಿ ಅಂದರೆ ಫಿಕ್ಸೆಡ್ ಡೆಪಾಸಿಟ್ ಮಾಡಲು ಸೌಲಭ್ಯವನ್ನು ಒದಗಿಸುತ್ತಿದೆ.

 

Image Source: The Economic Times

 

ಯಾವ ದರದಲ್ಲಿ ಬಡ್ಡಿಯ ಮೊತ್ತ ಬದಲಾವಣೆ ಆಗಿದೆ ಮತ್ತು ಅದರ ಪ್ರಯೋಜನಗಳು ಯಾವುವು ಎಂದು ತಿಳಿದುಕೊಳ್ಳೋಣ:

advertisement

ಪ್ರಸ್ತುತ ಫಿಕ್ಸೆಡ್ ಡೆಪಾಸಿಟ್ (Fixed Deposit) ಮಾಡಿದ್ದರೆ ಇದರಲ್ಲಿ ನೀವು ಶೇಕಡಾ 3 ರಿಂದ 8 ರಷ್ಟು ಬಡ್ಡಿಯ ಲಾಭವನ್ನು ಪಡೆಯುತ್ತೀರಿ. 500 ದಿನಗಳ ಎಫ್‌ಡಿ ಅಥವಾ ಫಿಕ್ಸೆಡ್ ಡೆಪಾಸಿಟ್ ಗೆ ಒಂದು ಬ್ಯಾಂಕ್ ಇಂದ ಸಿಗುವ ಗರಿಷ್ಠ ಎಂದರೆ ಶೇಕಡಾ 8% ಬಡ್ಡಿ ದರ ಆಗಿದೆ. ಇನ್ನು IDFC ಬ್ಯಾಂಕ್ ಮಾಡಿರುವ ಬದಲಾವಣೆ ಇಂದಾಗಿ ಹಿರಿಯ ನಾಗರಿಕರಿಗೆ ಹೆಚ್ಚು ಸೌಲಭ್ಯ ಸಿಗುತ್ತದೆ ಎಂದು ಹಲವು ಮೂಲಗಳು ತಿಳಿಸಿವೆ. ಹಾಗಾದರೆ ಸಾಮಾನ್ಯ ಜನರಿಗೆ ಮತ್ತು ಹಿರಿಯ ನಾಗರಿಕರಿಗೆ ಸಿಗಲಿರುವ ಬಡ್ಡಿಯ ಮೊತ್ತದ ವಿವರಗಳನ್ನು ನೋಡುವುದಾದರೆ…

 

Image Source: IDFC FIRST Bank

 

ಇನ್ನು ಸಾರ್ವಜನಿಕರಿಗೆ ಒಂದು ವರ್ಷಕ್ಕೆ ಅವರು ಇಟ್ಟಿರುವಂತಹ Fixed Deposit ಮೇಲೆ 6.50% ಬಡ್ಡಿ, 500 ದಿನಗಳ ಫಿಕ್ಸೆಡ್ ಡೆಪಾಸಿಟ್ ಗೆ 8% ಬಡ್ಡಿ, 500-548 ದಿನಗಳಿಗೆ 7.50% ಬಡ್ಡಿ, 549- 2 ವರ್ಷದ ಅವಧಿಗೆ 7.75% ಬಡ್ಡಿ, 2 ವರ್ಷದಿಂದ -3 ವರ್ಷಗಳ ಅವಧಿಗೆ 7.25% ಬಡ್ಡಿ, 3 ವರ್ಷಗಳಿಂದ 10 ವರ್ಷದ ಅವಧಿಗೆ 7% ಬಡ್ಡಿಯ ಮೊತ್ತ ಸಿಗಲಿದೆ. ಇದು ಐಡಿಎಫ್‌ಸಿ (IDFC) ಬ್ಯಾಂಕ್ ನಿಂದ ಬಡ್ಡಿಯ ಬದಲಾವಣೆ ಆಗಿ ಸಾರ್ವಜನಿಕರಿಗೆ ಸಿಗುತ್ತಿರುವಂತಹ ಲಾಭವಾಗಿದೆ.

ಇನ್ನು ಹಿರಿಯ ನಾಗರಿಕರಿಗೆ ನೋಡುವುದಾದರೆ 1 ವರ್ಷದ Fixed Deposit ಗೆ 7%, 1 ವರ್ಷದ ಅವಧಿಯಿಂದ 499 ದಿನಗಳಿಗೆ 8%, 500 ದಿನಗಳಿಗೆ 8.50% ಬಡ್ಡಿ , 549-2 ವರ್ಷದ ಅವಧಿಗೆ 8.25% ಬಡ್ಡಿ, 2 ವರ್ಷದಿಂದ 3 ವರ್ಷದ ಅವಧಿಗೆ 7.75% ಬಡ್ಡಿ, 3 ವರ್ಷದಿಂದ -10 ವರ್ಷದ ಅವಧಿಗೆ 7.50% ಬಡ್ಡಿ ಲಾಭವನ್ನು ಪಡೆಯಬಹುದಾಗಿದೆ. ಇನ್ನು ಈ ಬಾರಿ ಐಡಿಎಫ್ಸಿ IDFC ಬ್ಯಾಂಕ್ ಬಡ್ಡಿಯಲ್ಲಿನ ಬದಲಾವಣೆಯ ದರವು ಹಿರಿಯ ನಾಗರಿಕರಿಗೆ ಬಹಳ ಉಪಯುಕ್ತವಾಗಿದೆ. ಇನ್ನು ಈ ಬದಲಾವಣೆಯ ದರವು ಮಾರ್ಚ್ 31 2024ರಿಂದ ಜಾರಿಗೆ ಬರಲಿದೆ.

advertisement

Leave A Reply

Your email address will not be published.