Karnataka Times
Trending Stories, Viral News, Gossips & Everything in Kannada

Ration Card: ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಪ್ರಾರಂಭ, ಹೀಗೆ ಅರ್ಜಿ ಸಲ್ಲಿಸಿ

advertisement

ಇಂದು ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದ ನಂತರ‌ ರೇಷನ್ ಕಾರ್ಡ್ (Ration Card)ಗೆ ಭಾರಿ ಡಿಮ್ಯಾಂಡ್ ಹೆಚ್ಚಾಗಿದೆ. ರಾಜ್ಯ ಸರಕಾರದ ಗೃಹಲಕ್ಷ್ಮಿ(Gruha Lakshmi), ಗೃಹಜ್ಯೋತಿ (Gruha Jyoti), ಅನ್ನಭಾಗ್ಯ (Anna Bhagya) ಸೇರಿದಂತೆ ಎಲ್ಲ ಯೋಜನೆಗಳಿಗೂ ಈ ರೇಷನ್ ಕಾರ್ಡ್ ಬಹಳ ಅಗತ್ಯವಾಗಿ ಬೇಕಿದ್ದು, ಹಾಗಾಗಿ ಈ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಯಾವುದೇ ಸರ್ಕಾರಿ ಸೌಲಭ್ಯ ಪಡೆಯಬೇಕಾದರೆ ರೇಷನ್ ಕಾರ್ಡ್ ಅಗತ್ಯವಾಗಿ ಬೇಕು. ಇದೀಗ ಹೊಸ ಕಾರ್ಡ್ ಅರ್ಜಿ ಸಲ್ಲಿಕೆಗೂ ಆಹಾರ ಇಲಾಖೆ ಅವಕಾಶ ನೀಡಿದೆ.

ಅರ್ಜಿ ಪರಿಶೀಲನೆ

ರೇಷನ್ ಕಾರ್ಡ್ ಗಾಗಿ ಹೆಚ್ಚಿನ‌ ಜನರು 2020ರಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ರೂ ಈ ಹೊಸ ಕಾರ್ಡ್ ಅರ್ಜಿ ಸಲ್ಲಿಕೆ ಮಾಡಿದ ಫಲಾನುಭವಿಗಳಿಗೂ ರೇಷನ್ ಕಾರ್ಡ್ ಸಿಕ್ಕಿರಲಿಲ್ಲ. ಇದೀಗ ಅರ್ಜಿ ಸಲ್ಲಿಕೆ ಮಾಡಿದ್ದ ಫಲಾನುಭವಿಗಳಿಗೆ ಆಹಾರ ಇಲಾಖೆ ಸಚಿವ ಕೆಎಚ್ ಮುನಿಯಪ್ಪ (K H Muniyappa) ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಮಾರ್ಚ್ 31ರೊಳಗೆ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಹೊಸ ಪಡಿತರ ಚೀಟಿಯನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಹೊಸ ರೇಷನ್ ಕಾರ್ಡ್​​ಗೆ ಅರ್ಜಿ ಸಲ್ಲಿಕೆ ಮಾಡಿರುವ ಸುಮಾರು 2.95 ಲಕ್ಷ ಅರ್ಜಿಗಳ ಪರಿಶೀಲನೆ ಆಗಬೇಕಿದೆ. ಈ ಬಗ್ಗೆ ಆಹಾರ ಇಲಾಖೆ ಕೂಡ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಮಾಡಿದ್ದು ಕಾರ್ಡ್ ಗಳ ಪರಿಶೀಲನೆ ಕೂಡ ನಡೆಯುತ್ತಿದೆ ಎಂದಿದ್ದಾರೆ.

Image Source: Oneindia

Ration Card ಅರ್ಜಿ ಸಲ್ಲಿಕೆ ಯಾವಾಗ?

ಈಗಾಗಲೇ ರೇಷನ್ ಕಾರ್ಡ್ (Ration Card) ಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ನೀಡಿದೆ. ಅರ್ಜಿಗಳನ್ನು ಪರಿಶೀಲಿಸಿ ಮಾ.31ರೊಳಗೆ ಅರ್ಹರಿಗೆ ಪಡಿತರ ಚೀಟಿ ವಿತರಿಸಿ‌ ಈ ಕೆಲಸ ಮುಗಿದ ನಂತರ ಏಪ್ರಿಲ್‌ನಲ್ಲಿ ಮತ್ತೆ ಹೊಸ ಪಡಿತರ ಕಾರ್ಡುಗಳಿಗೆ ಅರ್ಜಿ ಆಹ್ವಾನಿಸಲಾಗುವುದು ಎಂದಿದ್ದಾರೆ.

advertisement

ಹೊಸದಾಗಿ Ration Card ಗೆ ಅರ್ಜಿ ಹಾಕಲು ಈ ದಾಖಲೆ ಬೇಕು

  • ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ವಿಳಾಸದ ಮಾಹಿತಿ
  • ಮೊಬೈಲ್ ಸಂಖ್ಯೆ ‌

ಈ ತಿದ್ದುಪಡಿಗೂ ಅವಕಾಶ ಇದೆ

  • ರೇಷನ್ ಕಾರ್ಡ್ ನಲ್ಲಿ ಏನಾದರೂ ಬದಲಾವಣೆ ಮಾಡಬೇಕಿದ್ದಲ್ಲಿ ನಿಮಗೆ ಕೆಲವೊಂದು ತಿದ್ದುಪಡಿಗೆ ಅವಕಾಶ ಇದೆ. ಹೆಸರನ್ನು ಕೂಡ ಬದಲಾವಣೆ ಮಾಡಬಹುದಾಗಿದೆ.
  • ಅದೇ ರೀತಿ ಮರಣ ಹೊಂದಿದವರ ಹೆಸರನ್ನು ಡಿಲೀಟ್ ಮಾಡಬಹುದಾಗಿದೆ.
  • ನಿಮ್ಮ ದಾಖಲೆ ಇಕೈವೈಸಿ (E-KYC) ಆಗದೇ ಇದ್ದಲ್ಲಿ ಈ ಕೆಲಸವೂ ಮಾಡಬಹುದು.

ಆನ್ಲೈನ್ ಅರ್ಜಿ ಸಲ್ಲಿಕೆ ಹೇಗೆ?

ಮೊದಲಿಗೆ https://ahara.kar.nic.in/ ಇಲ್ಲಿಗೆ ಹೋಗಿ ಮೊದಲಿಗೆ ಲಾಗಿನ್ ಆಗಿ, ನಂತರದಲ್ಲಿ select ಆಪ್ಚನ್ ಕ್ಲಿಕ್ ಮಾಡಿ, ಬೇಕಾದ ಮಾಹಿತಿಯನ್ನು ಹಾಕಿ, ಎಲ್ಲ ದಾಖಲೆಗಳನ್ನು ಸ್ಕ್ಯಾನ್, ಅಪ್‌ ಲೋಡ್ ಮಾಡಿ. ಎಲ್ಲ ದಾಖಲೆಗ ಗಳನ್ನು ಅಪ್‌ ಲೋಡ್ ಮಾಡಿದ ನಂತರ ಫಾರ್ಮ್ ಅನ್ನು ಸಬ್‌ ಮಿಟ್ ಮಾಡಿ.

advertisement

Leave A Reply

Your email address will not be published.