Karnataka Times
Trending Stories, Viral News, Gossips & Everything in Kannada

Gruha Lakshmi: ಗೃಹಲಕ್ಷ್ಮಿ ಹಣ ಖಾತೆಗೆ ಬರ್ತಿಲ್ವಾ? ಆಸಲಿ ಕಾರವೇನು? ಸ್ಪಷ್ಟನೆ ಕೊಟ್ಟ ಸಚಿವೆ

advertisement

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆ ಗಳಲ್ಲಿ ಗೃಹಲಕ್ಷ್ಮಿ (Gruha Lakshmi) ಯೋಜನೆಯು ಪ್ರಮುಖವಾಗಿದೆ.ಈ ಯೋಜನೆಯ ಮೂಲಕ ಮನೆಯ ಯಜಮಾನಿ ಮಹಿಳೆಯು ತಿಂಗಳಿಗೆ ಎರಡು ಸಾವಿರ ರೂಪಾಯಿ ಮೊತ್ತವನ್ನು ಪಡೆಯುತ್ತಿದ್ದಾರೆ. ಈಗಾಗಲೇ ಈ ಯೋಜನೆಗೆ ಹೆಚ್ಚಿನ ಮಹಿಳೆಯರು ನೊಂದಣಿ ಮಾಡಿದ್ದು ಅರ್ಜಿ ಸಲ್ಲಿಕೆ ಮಾಡಿದ್ದ ಕೆಲವು ಮಹಿಳೆಯರಿಗೆ ಹಣ ಜಮೆಯಾಗಿದೆ. ಆದ್ರೆ ಕೆಲವು ಮಹಿಳೆಯರಿಗೆ ಈ ಹಣ ಜಮೆಯಾಗಿಲ್ಲ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಸ್ಪಷ್ಟನೆ ನೀಡಿದ್ದಾರೆ.

ನೇರವಾಗಿ ಖಾತೆಗೆ ಹಣ ಜಮೆ

ಗೃಹಲಕ್ಷ್ಮಿ ಯೋಜನೆ ಮೂಲಕ ಮಹಿಳೆಯರಿಗೆ ಆರ್ಥಿಕ ನೆರವನ್ನು ಸರಕಾರ ನೀಡುತ್ತಿದ್ದು ಮಹಿಳೆಯರಿಗೆ 2000 ರೂ ಹಣವನ್ನು ಯಾವುದೇ ಮಧ್ಯವರ್ತಿಗಳ ನಡುವೆ ಇಲ್ಲದೆ ನೇರವಾಗಿ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡುತ್ತಿದೆ. ಹಿಂದೆಲ್ಲಾ ಹಣವನ್ನು ಟ್ರೆಷರಿ, ವಿವಿಧ ಅಧಿಕಾರಿಗಳ ಪರಿಶೀಲನೆಯೊಂದಿಗೆ ಸಂದಾಯವಾಗುತ್ತಿತ್ತು ಆದ್ರೆ, ಈಗ ಹೆಚ್ಚಿನ ಸಮಯ ತೆಗೆದುಕೊಳ್ಳದೆ ಸರಕಾರ ನೇರವಾಗಿ ಡಿಬಿಟಿ (DBT) ಮೂಲಕ ಹಣ ವರ್ಗಾವಣೆ ಮಾಡುತ್ತಿದೆ. ಇದಕ್ಕಾಗಿ ಮಹಿಳೆಯರ ಖಾತೆಗೆ ಬೇಗನೆ ಹಣ ಜಮೆಯಾಗುತ್ತಿದೆ.

Image Source: TV9 Kannada

advertisement

ಯಾಕಾಗಿ ಗೃಹಲಕ್ಷ್ಮಿ (Gruha Lakshmi) ಹಣಬಂದಿಲ್ಲ?

ಈ ಬಗ್ಗೆ ಸ್ಪಷ್ಟನೆ ಕೊಟ್ಟ ಮಹೀಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಮಾತನಾಡಿ ಒಂದು ಅಕ್ಷರ ತಪ್ಪಿದ್ದರೂ ಗೃಹಲಕ್ಷ್ಮಿಯ ಹಣ ಜಮೆಯಾಗೋದಿಲ್ಲ, ಇನ್ನೂ ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ ಇತ್ಯಾದಿ ಯಿಂದಲೂ ಗೃಹಲಕ್ಷ್ಮಿ ಹಣ ಜಮೆಯಾಗಿಲ್ಲ. ತಿದ್ದುಪಡಿ ಮಾಡಿದ್ರು ಕೆವೈಸಿ (KYC) ಮಾಡಿರಬೇಕು.

Image Source: defindia
  • ಒಬ್ಬ ಮಹಿಳೆಯ ಹೆಸರಿನಲ್ಲಿ ಮೂರು, ನಾಲ್ಕು ಖಾತೆಗಳಿದ್ದರೆ ಅಂತಹವರಿಗೆ ಗೃಹಲಕ್ಷ್ಮಿಯ ಹಣವಿಲ್ಲ
  • ಅರ್ಜಿ ಸಲ್ಲಿಸಿದ ಹೆಚ್ಚಿನ ಮಹೀಳೆಯರಿಗೆ ತಾಂತ್ರಿಕ ಸಮಸ್ಯೆಯಿಂದ ಹಣ ಜಮೆಯಾಗಿಲ್ಲ. ಅರ್ಜಿ ಸಲ್ಲಿಕೆ ಯಲ್ಲಿ ಮಾಹಿತಿ ಕೊರತೆಯಿಂದ ಈ ಹಣ ಪಡೆಯಲು ವಂಚಿತರಾಗುತ್ತಿದ್ದಾರೆ. ಹಾಗಾಗಿ ದಾಖಲೆ ಸರಿಪಡಿಸಬೇಕು.
  • ಬ್ಯಾಂಕ್‌ ಖಾತೆ (Bank Account) ಯೊಂದಿಗೆ ಆಧಾರ್‌ ಅನ್ನು ಲಿಂಕ್‌ ಮಾಡಿಸಿರಬೇಕು
  • ಕೆವೈಸಿ ಆಗಿರದ ಕಾರಣ ಹಣ ಹಾಕಲು ಸರ್ಕಾರ ಸಿದ್ಧವಾಗಿದ್ದರೂ ಹಣ ಹಾಕಲು ಸಾಧ್ಯವಾಗುತ್ತಿಲ್ಲ. ಅರ್ಜಿದಾರರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ದೂರವಾಣಿ ಕರೆ ಮೂಲಕ ಬ್ಯಾಂಕ್‌ ಖಾತೆಗಳನ್ನು ಸರಿಪಡಿಸಿಕೊಳ್ಳುವಂತೆ ಮಾಹಿತಿ ನೀಡಿದ್ದಾರೆ.

ಒಂದು ವೇಳೆ ಆಧಾರ್‌ ಕಾರ್ಡ್‌ ಲಿಂಕ್‌, ದಾಖಲೆ ಗಳನ್ನು ಸರಿಪಡಿಸಿಕೊಂಡರೇ ಒಂದು ಕಂತು ಬಾರದೇ ಇರುವ ಮಹಿಳೆಯರಿಗೆ ಎರಡು ಕಂತಿನ ಹಣ ಅವರ ಖಾತೆಗೆ ಒಟ್ಟಿಗೆ ಜಮಾ ಆಗಲಿದೆ ಎನ್ನುವ ಸ್ಪಷ್ಟನೆ ನೀಡಿದ್ದಾರೆ.

advertisement

Leave A Reply

Your email address will not be published.