Karnataka Times
Trending Stories, Viral News, Gossips & Everything in Kannada

BSNL: ಅತೀ ಕಡಿಮೆ ಬೆಲೆಗೆ 3 ರಿಚಾರ್ಜ್ ಘೋಷಿಸಿದ BSNL! ಜಿಯೋಗೆ ತಲೆನೋವು ಆರಂಭ

advertisement

ಸರ್ಕಾರಿ ಟೆಲಿಕಾಂ ಸಂಸ್ಥೆ ಆಗಿರುವಂತಹ BSNL ಇತ್ತೀಚಿನ ದಿನಗಳಲ್ಲಿ ಮತ್ತೆ ತನ್ನ ಗ್ರಾಹಕರನ್ನು ಮರುಕಳಿಸಿ ಪಡೆದುಕೊಳ್ಳಲು ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದರಲ್ಲೂ ವಿಶೇಷವಾಗಿ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಅತ್ಯಂತ ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯಿಸಿರುವಂತಹ ಕಂಪನಿಗಳಲ್ಲಿ BSNL ಮುಂಚೂಣಿ ಸ್ಥಾನದಲ್ಲಿದೆ ಕಾಣಿಸಿಕೊಳ್ಳುತ್ತದೆ ಎಂದು ಹೇಳಬಹುದಾಗಿದೆ. ಅದೇ ರೀತಿಯಲ್ಲಿ ಈಗ ಮತ್ತೊಂದು ಕಡಿಮೆ ಬೆಲೆಯ ಹಾಗೂ ಜನಪ್ರಿಯ ರಿಚಾರ್ಜ್ ಪ್ಲಾನ್ ಗಳನ್ನು ಗ್ರಾಹಕರೇ BSNL ನಿಮಗಾಗಿ ಜಾರಿಗೆ ತಂದಿದೆ.

BSNL ಸಂಸ್ಥೆಯ 200 ರೂಪಾಯಿಗಳ ಒಳಗೆ ಇರುವಂತಹ ರಿಚಾರ್ಜ್ ಪ್ಲಾನ್ ಗಳು:

BSNL ಸಂಸ್ಥೆ ತನ್ನ ಗ್ರಾಹಕರಿಗೆ ಹಣದ ವಿಚಾರದಲ್ಲಿ ಯಾವುದೇ ರೀತಿಯ ತೊಂದರೆ ನೀಡಬಾರದು ಎನ್ನುವ ಕಾರಣಕ್ಕಾಗಿ ಅತ್ಯಂತ ಕಡಿಮೆ ಬೆಲೆಯಲ್ಲಿ ಸಾಕಷ್ಟು ಉತ್ತಮ ಎನಿಸುವಂತಹ ರಿಚಾರ್ಜ್ ಪ್ಲಾನ್ ಗಳನ್ನು ಜಾರಿಗೆ ತಂದಿದ್ದು ಬನ್ನಿ ಅವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

BSNL Rs 147 Recharge Plan: 

 

Image Source: Gizbot Malayalam

 

advertisement

BSNL ಸಂಸ್ಥೆ ಪರಿಚಯಿಸಿರುವಂತಹ 147 ರೂಪಾಯಿಗಳು ರಿಚಾರ್ಜ್ ಪ್ಲಾನ್ ನಲ್ಲಿ 30 ದಿನಗಳ ವ್ಯಾಲಿಡಿಟಿಯನ್ನು ನೀವು ಪಡೆದುಕೊಳ್ಳಬಹುದಾಗಿದೆ. ಈ ರಿಚಾರ್ಜ್ ನಲ್ಲಿ ನೀವು 10 ಜಿಬಿಗಳ ಇಂಟರ್ನೆಟ್ ಸೇವೆಯನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಉಚಿತ BSNL ಟ್ಯೂನ್ ಅನ್ನು ಕೂಡ ನೀವು ಪಡೆದುಕೊಳ್ಳಬಹುದಾಗಿದ್ದು ಅನಿಯಮಿತ ಉಚಿತ ಕಾರ್ಯಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಈ ರಿಚಾರ್ಜ್ ಪ್ಲಾನ್ ನಲ್ಲಿ ಯಾವುದೇ ಉಚಿತ ಎಸ್ಎಂಎಸ್ ಗಳು ಸಿಗೋದಿಲ್ಲ.

BSNL Rs 186 Recharge Plan:

 

Image Source: Business Today

 

BSNL ಸಂಸ್ಥೆ ಪರಿಚಯಿಸಿರುವಂತಹ 186 ರೂಪಾಯಿಗಳ ರಿಚಾರ್ಜ್ ಪ್ಲಾನ್ ನಲ್ಲಿ ನಿಮಗೆ 28 ದಿನಗಳ ವ್ಯಾಲಿಡಿಟಿ ಸಿಗುತ್ತದೆ. ಯಾವುದೇ ನೆಟ್ವರ್ಕ್ ಗೆ ನೀವು ಈ ರಿಚಾರ್ಜ್ ಪ್ಲಾನ್ ನಲ್ಲಿ ಉಚಿತ ಕರೆಗಳನ್ನು ಮಾಡಬಹುದಾಗಿದೆ. BSNL ಟ್ಯೂನ್ ಗಳ ಜೊತೆಗೆ ಇತರ ಸೇವೆಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಪ್ರತಿದಿನ ಒಂದು ಜಿಬಿ ಡಾಟಾ ಹಾಗೂ 100 ಉಚಿತ ಎಸ್ಎಂಎಸ್ ಗಳನ್ನು ಮಾಡುವಂತಹ ಅವಕಾಶವನ್ನು ಕೂಡ ನೀಡಲಾಗುತ್ತದೆ. ಡೈಲಿ ಲಿಮಿಟ್ ಖಾಲಿಯಾದ ಮೇಲೆ ಇಂಟರ್ನೆಟ್ ಸ್ಪೀಡ್ 40kbps ಆಗುತ್ತದೆ.

BSNL Rs 118 Recharge Plan:

BSNL ಸಂಸ್ಥೆ ಪರಿಚಯಿಸಿರುವಂತಹ 118 ರೂಪಾಯಿಗಳ ರಿಚಾರ್ಜ್ ಪ್ಲಾನ್ ನಲ್ಲಿ ನೀವು ಉಚಿತ ಕಾಲಿಂಗ್ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. 20 ದಿನಗಳ ವ್ಯಾಲಿಡಿಟಿ ಜೊತೆಗೆ ಬರುವಂತಹ ಈ ರಿಚಾರ್ಜ್ ಪ್ಲಾನ್ ನಲ್ಲಿ ನೀವು ಒಟ್ಟಾರೆಯಾಗಿ 10 ಜಿಬಿ ಇಂಟರ್ನೆಟ್ ಡೇಟಾ ಸೇವೆಯನ್ನು ಪಡೆದುಕೊಳ್ಳಲಿದ್ದೀರಿ. ಇನ್ನು ಈ ರಿಚಾರ್ಜ್ ಪ್ಲಾನ್ ನಲ್ಲಿ ಸಂಸ್ಥೆ ನಿಮಗೆ ಯಾವುದೇ ಉಚಿತ ಎಸ್ಎಂಎಸ್ ಮಾಡುವಂತಹ ಸೇವೆಯನ್ನು ನೀಡುವುದಿಲ್ಲ.

advertisement

Leave A Reply

Your email address will not be published.