Karnataka Times
Trending Stories, Viral News, Gossips & Everything in Kannada

WhatsApp: ವಾಟ್ಸಾಪ್ ಬಳಸಲು ಇನ್ಮೇಲೆ ರಿಚಾರ್ಜ್ ಬೇಕಿಲ್ಲ! ಹೊಸ ವಿಧಾನ ಇಲ್ಲಿದೆ

advertisement

ವಾಟ್ಸ್ ಆ್ಯಪ್ (WhatsApp) ನಾವು ದಿನ ನಿತ್ಯ ಬಳಕೆ ಮಾಡುವ ಆ್ಯಪ್ ಗಳಲ್ಲಿ ಬಹಳ ಮಹತ್ವಪೂರ್ಣ ಸ್ಥಾನವನ್ನು ಹೊಂದಿದೆ. ವಾಟ್ಸ್ ಆ್ಯಪ್ ಮೂಲಕ ಅನೇಕ ಮಾಹಿತಿಗಳು, ಫೋಟೋಗಳು ನಿತ್ಯ ರವಾನೆ ಆಗುತ್ತಿದ್ದು ಇಂದು ಸಾಮಾಜಿಕ ಜಾಲತಾಣದ ಒಂದು ಆ್ಯಪ್ ಅನ್ನುವುದಕ್ಕಿಂತಲೂ ಹೆಚ್ಚಾಗಿ ಪ್ರಾಮುಖ್ಯತೆ ಪಡೆಯುತ್ತಿದೆ. ಹಾಗಿದ್ದರೂ ಇಂಟರ್ ನೆಟ್ ಸಮಸ್ಯೆ ಎನ್ನುವುದು ನಿಮ್ಮ ಸಾಮಾಜಿಕ ಜಾಲತಾಣಗಳನ್ನೇ ಹತ್ತಿಕ್ಕುತ್ತಿದೆ‌. ಅನೇಕ ಸಂದರ್ಭಗಳಲ್ಲಿ ಇಂಟರ್ ನೆಟ್ ಸರಿಯಾಗಿ ಸಿಗದೆ ನಿಮ್ಮ ದೈನಿಕ ಕೆಲಸ ಕಾರ್ಯಕ್ಕೆ ಕೂಡ ತೊಂದರೆ ಆಗುತ್ತಿದೆ‌.

ವಾಟ್ಸ್ ಆ್ಯಪ್ ನಲ್ಲಿ ಚಾಟಿಂಗ್ ಮಾಡುವ ಜೊತೆ ಜೊತೆಗೆ ವೀಡಿಯೋ, ಫೋಟೋ ಹಾಗೂ ಇತರ ಡಾಕ್ಯುಮೆಂಟ್ ಅನ್ನು ಕೂಡ ಕಳಿಸಿಕೊಡಬಹುದು. ಆದರೆ ಕೆಲವೊಂದು ಸಂದರ್ಭಗಳಲ್ಲಿ ಸರಿಯಾಗಿ ಇಂಟರ್ನೆಟ್ ಇಲ್ಲದೆ ನೀವು ಕಳಿಸಬೇಕಾದ ಮಾಹಿತಿ ಅಥವಾ ದಾಖಲಾತಿ ಹಾಗೇ ಉಳಿದು ಬಿಡುವ ಸಾಧ್ಯತೆ ಕೂಡ ಇದೆ.

ಹಾಗಾಗಿ ಇಂಟರ್ನೆಟ್ ಇಲ್ಲದೆ ಸೇವೆ ಸಿಗುವಂತಿದ್ದರೆ ಅದು ಎಷ್ಟು ಆರಾಮ ಇರಬಹುದಾಗಿತ್ತು ಎಂದು ಅನಿಸುವುದು ಇದೆ. ಇಂಥವರಿಗಾಗಿಯೇ ಇಂಟರ್ನೆಟ್ ಇಲ್ಲದೆ ವಾಟ್ಸ್ ಆ್ಯಪ್ (WhatsApp) ಬಳಕೆ ಮಾಡಲು ವಿನೂತನ ವ್ಯವಸ್ಥೆ ಒಂದನ್ನು ಕಂಡುಕೊಳ್ಳಲಾಗಿದೆ.

ಬ್ಲೂಟುತ್ ಮೂಲಕ ಕಾರ್ಯಾರಂಭ:

 

Image Source: Trengo

 

advertisement

ಇಂಟರ್ನೆಟ್ ಸೌಲಭ್ಯ ಇಲ್ಲದೆ ಖಾಲಿ ಬ್ಲೂ ಟುತ್ (Bluetooth) ಮೂಲಕ ಇಂಟರ್ನೆಟ್ ರಹಿತವಾಗಿ ನಿಮ್ಮ ಹತ್ತಿರದವರಿಗೆ ಮಾಹಿತಿ, ಫೋಟೋ ವೀಡಿಯೋ ಇತ್ಯಾದಿಯನ್ನು ವಾಟ್ಸ್ ಆ್ಯಪ್ ಮೂಲಕ ಕಳುಹಿಸಿ ಕೊಡಬಹುದಾಗಿದೆ. ಸ್ಥಳೀಯವಾಗಿ ಫೈಲ್ ಗಳನ್ನು ಹಂಚಿಕೊಳ್ಳಲು ಈ ವಿಧಾನ ಸಹಕಾರಿ ಆಗಿದ್ದು ಇದರಲ್ಲಿ End to end encrypted ವಿಧಾನ ಇರಲಿದೆ. ಹಾಗಾಗಿ ಈ‌ ಮಾಹಿತಿ ಜಾರಿಗೆ ಬಂದರೆ ಅನೇಕರಿಗೆ ಅನೇಕ ವಿಧವಾಗಿ ಅನುಕೂಲ ಆಗಲಿದೆ ಎನ್ನಬಹುದು.

ಅಪ್ಲಿಕೇಶನ್ ಅಗತ್ಯ:

ಇಂಟರ್ನೆಟ್ ಇಲ್ಲದೆ ವಾಟ್ಸ್ ಆ್ಯಪ್ (WhatsApp) ಬಳಕೆ ಮಾಡಲು ನೀವು ನಿಮ್ಮ ಆ್ಯಂಡ್ರಾಯ್ಡ್ ಫೋನ್ ನಲ್ಲಿ ಇದಕ್ಕಾಗಿ ಅಪ್ಲಿಕೇಶನ್ ಒಂದನ್ನು ತೆರೆಯಬೇಕಿದ್ದು ಅದರ ಮೂಲಕ ಬ್ಲೂಟುತ್ ಕನೆಕ್ಟ್ ಮಾಡಿಕೊಂಡರೆ ಆಫ್ಲೈನ್ ಮೂಲಕ ನೀವು ವಾಟ್ಸ್ ಆ್ಯಪ್ ಬಳಸಬಹುದು. ಆದರೆ ಇದು ಐಫೋನ್ ನಲ್ಲಿ ಕಾರ್ಯಾಚರಿಸಲು ಪ್ರತ್ಯೇಕ ವಿಧಾನ ಜಾರಿ ತರಲು ಚಿಂತಿಸಲಾಗುತ್ತಿದೆ ಎಂದು ಹೇಳಬಹುದು.

ಯಾವಾಗ ಬರುತ್ತೆ:

ಈ ಒಂದು ಇಂಟರ್ನೆಟ್ ರಹಿತ ವಾಟ್ಸ್ ಆ್ಯಪ್ (WhatsApp) ಬಳಕೆ ವ್ಯವಸ್ಥೆ 2024ರ ಡಿಸೆಂಬರ್ ಅಂತ್ಯದ ಒಳಗೆ ಜಾರಿ ಆಗುವ ಸಾಧ್ಯತೆ ಇದೆ. ಆದರೂ ಈ ಬಗ್ಗೆ ಅಧಿಕೃತ ಮಾಹಿತಿ ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ. ಇದೇ ವ್ಯವಸ್ಥೆ ಬೇರೆ ಫೇಸ್‌ಬುಕ್‌ (Facebook), ಇನ್ಸ್ಟಾಗ್ರಾಂ (Instagram) ನಲ್ಲಿ ಕೂಡ ಬರುವ ಸಾಧ್ಯತೆ ಶೀಘ್ರವೇ ಇದೆ ಎನ್ನಬಹುದು.

advertisement

Leave A Reply

Your email address will not be published.