Karnataka Times
Trending Stories, Viral News, Gossips & Everything in Kannada

Electric Bikes: ಬುಲೆಟ್ ರೀತಿಯೇ ಕಾಣುವ 140Km ಮೈಲೇಜ್ ಕೊಡುವ ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆ! ಕಡಿಮೆ ಬೆಲೆಯ ಸ್ವದೇಶಿ ಬೈಕ್

advertisement

Stylish Electric Bikes: ಇತ್ತೀಚಿನ ದಿನಗಳಲ್ಲಿ ಭಾರತೀಯ ಆಟೋ ಮೊಬೈಲ್ ಮಾರುಕಟ್ಟೆಗಳೆಲ್ಲವೂ ಎಲೆಕ್ಟ್ರಿಕ್ ವಾಹನಗಳಿಂದ ತುಂಬಿಕೊಳ್ಳುತ್ತಿದ್ದು, ಜನರು ಕೂಡ ಒಮ್ಮೆ ಚಾರ್ಜ್ ಮಾಡಿ ಆರಾಮದಾಯಕವಾಗಿ ಪ್ರಯಾಣಿಸಬಹುದಾ ಎಲೆಕ್ಟ್ರಿಕ ವಾಹನಗಳತ್ತ ಹೆಚ್ಚು ಮನಸ್ಸೋತು ಹೋಗುತ್ತಿದ್ದಾರೆ. ಹೀಗಾಗಿ ಪೆಟ್ರೋಲ್ ಹಾಗೂ ಡೀಸೆಲ್ ಇಂಧನದ ವಾಹನ ತಯಾರಿಕೆಗಳು ಕೂಡ ಕಡಿಮೆಯಾಗಿದ್ದು ಎಲೆಕ್ಟ್ರಿಕ್ ವಿಭಾಗದಲ್ಲಿ ಪ್ರತಿದಿನ ವಿಧವಿಧವಾದಂತಹ ಆವಿಷ್ಕಾರಗಳು ನಡೆಯುತ್ತಾ ಅದ್ಭುತ ಮೈಲೇಜ್ ಕೆಪ್ಯಾಸಿಟಿ(Mileage Capacity) ಹಾಗೂ ವೈಶಿಷ್ಟತೆಗಳನ್ನು ಹೊಂದಿರುವ ಕಾರುಗಳು/ಬೈಕ್ಗಳು ಮಾರುಕಟ್ಟೆಗೆ ಬರುತ್ತಲೇ ಇರುತ್ತದೆ.

ಅದರಂತೆ ಸದ್ಯ ಥೇಟ್ ಬುಲೆಟ್ ಬೈಕಿಗೆ ಹೋಲಿಕೆಯಾಗುವಂತಹ ಎಲೆಕ್ಟ್ರಿಕ್ ವಾಹನ(Electric Vehicle) ಒಂದನ್ನು ಎಕೋ ಕಂಪನಿ ಪರಿಚಯಿಸಿದ್ದು, ಗ್ರಾಹಕರು ಇದರ ಅದ್ಭುತ ಸ್ಟ್ರಾಮಿ ಲುಕ್ಕಿಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಹಾಗಾದ್ರೆ ನೀವು ಕೂಡ ಎಲೆಕ್ಟ್ರಿಕ್ ಬೈಕನ್ನು ಖರೀದಿ ಮಾಡಲು ಯೋಚಿಸುತ್ತಿದ್ದೀರಾ? ಹಾಗಾದ್ರೆ ಕಡಿಮೆ ಬೆಲೆಯಲ್ಲಿ ಅದ್ಭುತ ಮೈಲೇಜ್ ನೀಡುವಂತಹ

What is the price of Eko Tejas e-Dyroth bike?Which electric scooter gives 200 km range?
Image Source: Autocar India

ಒಳ್ಳೆಯ ಆಯ್ಕೆ. ಎಲೆಕ್ಟ್ರಿಕ್ ವಾಹನದ ಕುರಿತು ಈ ಪುಟದ ಮುಖಾಂತರ ಮತ್ತಷ್ಟು ಸಂಕ್ಷಿಪ್ತ ವಿವರಣೆಯನ್ನು ತಿಳಿಯಿರಿ.

ಎಕೋ-ವೈಶಿಷ್ಟ್ಯತೆಗಳು

advertisement

ಈ ಆವೃತ್ತಿಯ ಸ್ವಚ್ಛ ಹೊಸ ಎಲೆಕ್ಟ್ರಿಕ್ ಬೈಕ್ ಇದಾಗಿದ್ದು ನೂತನ ವೈಶಿಷ್ಟ್ಯತೆಗಳಾದ ಎಲ್ಇಡಿ ಹೆಡ್ ಲೈಟ್ ಮತ್ತು ಟೆಲ್ ಲೈಟ್, ರೈಡಿಂಗ್ ಮೋಡ್, ಮೊಬೈಲ್ ಕನೆಕ್ಟಿವಿಟಿ(Mobile Connectivity), ಚಾರ್ಜಿಂಗ್ ಪಾಯಿಂಟ್, ಓಡೋ ಮೀಟರ್, ಡಿಜಿಟಲ್ ಡಿಸ್ಟೆನ್ಸ್ ಮೀಟರ್(Digital Distance Meter) ಮತ್ತು ನ್ಯಾವಿಗೇಶನ್ ಸಿಸ್ಟಮ್ ನಂತಹ ಅತ್ಯಾಕರ್ಷಕ ಫೀಚರ್ಸ್ ಗಳನ್ನು ಎಕೊನಲ್ಲಿ ಅಳವಡಿಸಿದ್ದಾರೆ.

ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ 140 ಕಿಲೋಮೀಟರ್ ಗ್ಯಾರಂಟಿ

ಅದ್ಭುತ ಮೈಲೇಜ್ ನೀಡುವಂತಹ ಎಲೆಕ್ಟ್ರಿಕ್ ಬೈಕ್ ಗಳ ವರ್ಗದಲ್ಲಿ Eko Tejas E-Dyroth ಕೂಡ ಸ್ಥಾನವನ್ನು ಪಡೆದುಕೊಂಡಿದ್ದು, ನಾಲ್ಕರಿಂದ ಐದು ಗಂಟೆಗಳ ಕಾಲ ಒಮ್ಮೆ ಫುಲ್ ಚಾರ್ಜ್(full charge) ಮಾಡಿದ್ರೆ, ಸರಾಸರಿ 130 ರಿಂದ 140 km ವರೆಗಿನ ಮೈಲೇಜ್ ಸಾಮರ್ಥ್ಯವನ್ನು ನೀಡುತ್ತದೆ.

What is the price of Eko Tejas e-Dyroth bike?Which electric scooter gives 200 km range?
Image Source: Autocar India

ಕಡಿಮೆ ಬೆಲೆಯಲ್ಲಿ ಗುಣಮಟ್ಟ ಬ್ಯಾಟರಿ ಪವರ್

ಎಕೋ ಕಂಪನಿ ಅತಿ ಕಡಿಮೆ ಬೆಲೆಗೆ ಬಹಳ ಅದ್ಭುತವಾಗಿ ಕೆಲಸ ಮಾಡುವ ಬ್ಯಾಟರಿ ಒದಗಿಸುತ್ತಿದ್ದು, ಕೇವಲ 1.30 ಲಕ್ಷ ಬೆಲೆಬಾಳುವಂತಹ ಈ ಗಾಡಿಯಲ್ಲಿ ಬರೋಬ್ಬರಿ 4KW ಶಕ್ತಿ ಉತ್ಪಾದಿಸುವ ಸಾಮರ್ಥ್ಯವಿದೆ. ನೋಡಲು ಬುಲೆಟ್(Bullet) ನಂತೆ ಕಾಣುವುದಲ್ಲದೆ ಅದರ ರೇಂಜ್ ಗೆ ಸರಿದೂಗುವಂತಹ ಮೈಲೇಜ್ ಸಾಮರ್ಥ್ಯವನ್ನು ಎಕೋ ನೀಡುತ್ತದೆ.

advertisement

Leave A Reply

Your email address will not be published.