Karnataka Times
Trending Stories, Viral News, Gossips & Everything in Kannada

Gold: 10 ಗ್ರಾಂ ಗಿಂತ ಹೆಚ್ಚಿನ ಬಂಗಾರ ಇರುವ ಎಲ್ಲರಿಗೂ ಸ್ಟೇಟ್ ಬ್ಯಾಂಕ್ ಕಡೆಯಿಂದ ಸಿಹಿಸುದ್ದಿ!

advertisement

ಭಾರತ ದೇಶದ ಅತ್ಯಂತ ದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಪರಿಷ್ಕರಿಸಲಾಗಿರುವಂತಹ ಗೋಲ್ಡ್ ಡೆಪಾಸಿಟ್ ಯೋಜನೆ (Gold Deposit Scheme) ಯನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದೆ. ಇದನ್ನು R-GDS ಯೋಜನೆ ಎಂಬುದಾಗಿ ಕರೆಯಲಾಗುತ್ತದೆ ಹಾಗೂ ಇದರ ಅಡಿಯಲ್ಲಿ ಗ್ರಾಹಕರು ಅತ್ಯಂತ ಸುರಕ್ಷಿತವಾಗಿ ಹೂಡಿಕೆ ಮಾಡುವ ಮೂಲಕ ಸಾಕಷ್ಟು ಹಣವನ್ನು ಸಂಪಾದನೆ ಮಾಡಬಹುದಾಗಿದೆ. 10 ಗ್ರಾಂ ಗಿಂತ ಹೆಚ್ಚು ಬಂಗಾರ (Gold) ಇದ್ದವರಿಗೆ ಇದು ಭರ್ಜರಿ ಸಿಹಿಸುದ್ದಿಯಾಗಿದೆ.

R-GDS ಯೋಜನೆ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ ಮಾಹಿತಿಗಳು:

ಅರ್ಹತೆ:

ಭಾರತದ ಪೌರತ್ವವನ್ನು ಹೊಂದಿರುವಂತಹ ಯಾವುದೇ ವ್ಯಕ್ತಿ, ಉದ್ಯಮ, ಪಾರ್ಟ್ನರ್ಶಿಪ್ ವ್ಯವಹಾರಗಳು, ಅವಿಭಜಿತ ಹಿಂದೂ ಕುಟುಂಬ, SEBI ಅಡಿಯಲ್ಲಿ ರಿಜಿಸ್ಟರ್ ಆಗಿರುವಂತಹ ಮ್ಯೂಚುವಲ್ ಫಂಡ್ ಹಾಗೂ ಎಕ್ಸ್ಚೇಂಜ್ ಟ್ರೇಡ್ಗಳು, ಸರ್ಕಾರದ ಅಧಿಕಾರದಲ್ಲಿರುವಂತಹ ಸಂಸ್ಥೆಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ.

ಎಷ್ಟು ಹೂಡಿಕೆ ಮಾಡಬಹುದು?

 

Image Source: Moneycontrol

 

ಮಿನಿಮಮ್ 10 ಗ್ರಾಂ ಚಿನ್ನ (Gold) ವನ್ನು ಹೂಡಿಕೆ ಮಾಡಬೇಕಾಗಿರುತ್ತದೆ ಹಾಗೂ ಅದರಲ್ಲಿ ಯಾವುದೇ ರೀತಿಯ ಹವಳ ಅಥವಾ ವಜ್ರಗಳು ಇರುವ ಹಾಗಿಲ್ಲ. ಯಾವುದೇ ರೂಪದಲ್ಲಿ ಇರುವಂತಹ ಚಿನ್ನವನ್ನು ನೀವು ಯೋಜನೆಗೆ ಹೂಡಿಕೆ ಮಾಡಬಹುದಾಗಿದ್ದು ಮ್ಯಾಕ್ಸಿಮಮ್ ಯಾವುದೇ ಲಿಮಿಟ್ ಇಲ್ಲ.

ಡೆಪಾಸಿಟ್ ಮಾಡುವಂತಹ ವಿಧಗಳು:

advertisement

  • ಶಾರ್ಟ್ ಟರ್ಮ್ ಬ್ಯಾಂಕ್ ಡೆಪಾಸಿಟ್ (Short Term Bank Deposit) ನಲ್ಲಿ ಒಂದರಿಂದ ಮೂರು ವರ್ಷಗಳ ಕಾಲ ಹೂಡಿಕೆ ಮಾಡಬಹುದಾಗಿದೆ.
  • ಮೀಡಿಯಂ ಟರ್ಮ್ ಗೌರ್ಮೆಂಟ್ ಡೆಪಾಸಿಟ್ ನಲ್ಲಿ ಐದರಿಂದ ಏಳು ವರ್ಷಗಳ ಕಾಲ ಹೂಡಿಕೆ ಮಾಡಬಹುದು.
  • ದೀರ್ಘಕಾಲಿಕ ಗೌರ್ಮೆಂಟ್ ಡೆಪಾಸಿಟ್ ನಲ್ಲಿ 12 ರಿಂದ 15 ವರ್ಷಗಳ ಕಾಲ ಹೂಡಿಕೆ ಮಾಡಬಹುದು.

ಬಡ್ಡಿ ದರ:

 

Image Source: Business Today

 

  • ಒಂದು ವರ್ಷಗಳ ಹೂಡಿಕೆ ಮೇಲೆ ವಾರ್ಷಿಕ 0.50%
  • ಒಂದು ವರ್ಷಗಳಿಂದ ಎರಡು ವರ್ಷಗಳ ನಡುವಿನ ಹೂಡಿಕೆಯ ಮೇಲೆ 0.55 ಪ್ರತಿಶತ
  • ಎರಡರಿಂದ ಮೂರು ವರ್ಷಗಳ ನಡುವೆ 0.60 ಪ್ರತಿಶತ.
  • ಮೀಡಿಯಂ ಟರ್ಮ್ ನಲ್ಲಿ 2.25 ಪ್ರತಿಶತ ಹಾಗೂ ದೀರ್ಘಕಾಲಿಕ ಹೂಡಿಕೆಯಲ್ಲಿ 2.50% ವಾರ್ಷಿಕ ಬಡ್ಡಿ ದರವನ್ನು ಪಡೆದುಕೊಳ್ಳಲಿದ್ದೀರಿ.

ಮರುಪಾವತಿ:

  • ಶಾರ್ಟ್ ಟರ್ಮ್ ಹೂಡಿಕೆಗೆ ಅದಕ್ಕೆ ಸರಿಸಮಾನವಾಗಿರುವಂತಹ ಚಿನ್ನ (Gold) ಅಥವಾ ಹಣ (Cash) ವನ್ನು ನೀವು ಮೆಚುರಿಟಿ ದಿನಾಂಕದಂದು ಪಡೆದುಕೊಳ್ಳುತ್ತೀರಿ.
  • ಮಧ್ಯಮ ಹಾಗೂ ದೀರ್ಘಕಾಲಿಕ ಹೂಡಿಕೆಗಳ ಮೇಲೆ ನೀವು ಮೆಚುರಿಟಿ ಸಮಯದಲ್ಲಿ ಹಣವನ್ನು ಮರುಪಾವತಿ ಮಾಡಿಸಿಕೊಳ್ಳುವಾಗ ಆಗ ಇರುವಂತಹ ಚಿನ್ನದ ಬೆಲೆಗೆ ಸರಿಹೊಂದುವಂತೆ ಕ್ಯಾಶ್ ಅಥವಾ ಚಿನ್ನದ ಮೂಲಕ ನೀವು ಹೂಡಿಕೆಯ ಮೌಲ್ಯವನ್ನು ವಾಪಸ್ ಪಡೆದುಕೊಳ್ಳುತ್ತೀರಿ. ಈ ಸಮಯದಲ್ಲಿ ಹೆಚ್ಚುವರಿ ಚಾರ್ಜಸ್ ರೂಪದಲ್ಲಿ 0.20 ಪ್ರತಿಶತ ಹಣವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಮ್ಮಿಂದ ಪಡೆದುಕೊಳ್ಳಲಿದೆ.

ಒಂದು ವೇಳೆ ಸಮಯಕ್ಕಿಂತ ಮುಂಚೆ ಮಾಡಿರುವ ಹೂಡಿಕೆಯನ್ನು ವಾಪಸ್ ಪಡೆದುಕೊಳ್ಳಬೇಕು ಎನ್ನುವುದಾಗಿ ಲೆಕ್ಕಾಚಾರ ಹಾಕಿದರೆ.

ಶಾರ್ಟ್ ಟರ್ನ್ ಹೂಡಿಕೆ ಮೇಲೆ ಒಂದು ವರ್ಷಗಳ ನಂತರ ನಿಮ್ಮ ಹೂಡಿಕೆಯನ್ನು ಕೆಲವೊಂದು ಪಾವತಿಯ ನಂತರ ಪಡೆದುಕೊಳ್ಳಬಹುದಾಗಿದೆ.

ಮಧ್ಯಮ ಹೂಡಿಕೆ ಮೇಲೆ ನೀವು ಮೂರು ವರ್ಷಗಳ ನಂತರ ಪಡೆದುಕೊಳ್ಳಬಹುದಾಗಿದ್ದು ಬಡ್ಡಿಯ ಮೇಲೆ ಪೆನಾಲ್ಟಿಯನ್ನು ಕಟ್ಟಬೇಕಾಗುತ್ತದೆ ಹಾಗೂ ದೀರ್ಘಕಾಲಿಕ ಹೂಡಿಕೆಯ ಮೇಲೆ ಐದು ವರ್ಷಗಳ ನಂತರ ಮರುಪಾವತಿಯನ್ನು ಪಡೆದುಕೊಳ್ಳಬಹುದಾಗಿತ್ತು ಇಲ್ಲಿ ಕೂಡ ಬಡ್ಡಿಯ ಮೇಲೆ ಪೆನಾಲ್ಟಿಯನ್ನು ಕಟ್ಟ ಬೇಕಾಗುತ್ತದೆ

advertisement

Leave A Reply

Your email address will not be published.