Karnataka Times
Trending Stories, Viral News, Gossips & Everything in Kannada

Credit-Debit Card: ಕ್ರೆಡಿಟ್ ಕಾರ್ಡ್‌ ಡೆಬಿಟ್ ಕಾರ್ಡ್ ಗೆ ಹೊಸ ರೂಲ್ಸ್ ! ಕೇಂದ್ರ ಸರ್ಕಾರದ ಹೊಸ ಹೇಳಿಕೆ

advertisement

ಈ ಡಿಜಿಟಲ್ ಯುಗದಲ್ಲಿ ಯಾರು ತಾನೇ ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ (Credit-Debit Card) ಬಳಸುವುದಿಲ್ಲ ಹೇಳಿ ಭಾರತೀಯ ರಿಸರ್ವ್‌ ಬ್ಯಾಂಕ್‌ ಕ್ರೆಡಿಟ್ ಕಾರ್ಡ್ (Credit Card) ನೆಟ್ವರ್ಕ್‌ಗಳು ಹಾಗೂ ಕಾರ್ಡ್ ನೀಡುವ ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳಿಗೆ RBI ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ ಈಗ ಕಾರ್ಡ್ ವಿತರಣೆ ಮಾಡುವ ಬ್ಯಾಂಕ್‌ಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುವಾಗ ಒಂದಕ್ಕಿಂತ ಹೆಚ್ಚು ಕಾರ್ಡ್ ನೆಟ್ವರ್ಕ್‌ಗಳ ಆಯ್ಕೆಯನ್ನು ನೀಡಬೇಕಾಗುತ್ತದೆ. ಅಂದರೆ ಬ್ಯಾಂಕ್‌ಗಳು ಗ್ರಾಹಕನಿಗೆ ಯಾವ ನೆಟ್ವರ್ಕ್‌ನ ಕ್ರೆಡಿಟ್ ಕಾರ್ಡ್ (Credit Card) ಬೇಕು ಎಂದು ಕೇಳಬೇಕಾಗುತ್ತದೆ.

ಅಷ್ಟಕ್ಕೂ ಏನಿದು ಕಾರ್ಡ್‌ ನೆಟ್ವರ್ಕ್?

 

Image Source: Business Today

 

ಆರಾಮದಾಯಕ ಬಳಕೆಗಾಗಿ ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ (Credit-Debit Card) ಬಳಸುತ್ತೇವೆ. ಹಣ ಮುಕ್ತ ವ್ಯವಹಾರ ಮಾಡುತ್ತೇವೆ, ಪ್ರಸ್ತುತ ಭಾರತದಲ್ಲಿ 5 ಕಾರ್ಡ್ ನೆಟ್‌ವರ್ಕ್ ಕಂಪನಿಗಳಿವೆ. ವೀಸಾ (Visa), ಮಾಸ್ಟರ್‌ಕಾರ್ಡ್ (Master Card), ರುಪೇ (RuPay), ಅಮೇರಿಕನ್ ಎಕ್ಸ್‌ಪ್ರೆಸ್ (American Express) ಮತ್ತು ಡೈನರ್ಸ್ ಕ್ಲಬ್ (Diners Club). ಜಾಗತಿಕ ಮಟ್ಟದಲ್ಲಿ ವೀಸಾ (Visa) ಮತ್ತು ಮಾಸ್ಟರ್‌ಕಾರ್ಡ್‌(Master Card) ನ್ನು ಹೆಚ್ಚಾಗಿ ಬಳಸಲಾಗುತ್ತದೆ.

ರುಪೇ (RuPay) ಭಾರತದ ನ್ಯಾಷನಲ್‌ ಪೇಮೆಂಟ್ ಕಾರ್ಪೊರೇಷನ್‌ ಆಫ್‌ ಇಂಡಿಯಾ ಅಭಿವೃದ್ಧಿಪಡಿಸಿರುವ ಸಂಪೂರ್ಣ ದೇಸಿ ನೆಟ್ವರ್ಕ್‌ ಆಗಿದೆ. ಈ ಕಂಪನಿಗಳು ವಿವಿಧ ಹಣಕಾಸು ಸಂಸ್ಥೆಗಳೊಂದಿಗೆ ಒಪ್ಪಂದವನ್ನು ಹೊಂದಿರುತ್ತವೆ. ಈ ಕಾರಣದಿಂದಾಗಿ ಇಲ್ಲಿಯವರೆಗೆ ಗ್ರಾಹಕರು ತಮ್ಮ ಆಯ್ಕೆಯ ಕಾರ್ಡ್ ನೆಟ್‌ವರ್ಕ್ ಅನ್ನು ಪಡೆಯುವ ಆಯ್ಕೆ ಇರಲಿಲ್ಲ.

advertisement

ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ (Credit-Debit Card) ಬಳಕೆದಾರರಿಗೆ ಇದರಿಂದ ಏನು ಪ್ರಯೋಜನ?

 

Image Source: Fintra

 

ಕೆಲವು ಕಾರ್ಡ್ ನೆಟ್ವರ್ಕ್‌ಗಳು ಕ್ರೆಡಿಟ್ ಕಾರ್ಡ್‌ (Credit Card) ಗಳ ಮೇಲೆ ಹೆಚ್ಚಿನ ವಾರ್ಷಿಕ ಶುಲ್ಕವನ್ನು ವಿಧಿಸುತ್ತವೆ. ಕೆಲವು ಕಡಿಮೆ ಶುಲ್ಕ ವಿಧಿಸುತ್ತವೆ. ಹೀಗಾಗಿ ಬ್ಯಾಂಕ್‌ಗಳು ಒಂದೇ ನೆಟ್ವರ್ಕ್‌ ಜೊತೆ ಟೈಅಪ್‌ ಇದ್ದಲ್ಲಿ, ಹೆಚ್ಚಿನ ಶುಲ್ಕ ಇದ್ದರೂ ನೀವು ಅನಿವಾರ್ಯವಾಗಿ ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ.ಇದೀಗ ನೆಟ್ವರ್ಕ್‌ ಆಯ್ಕೆಯ ಅವಕಾಶ ಸಿಗುವುದರಿಂದ ನೀವು ಕಡಿಮೆ ಶುಲ್ಕ ವಿಧಿಸುವ ನೆಟ್ವರ್ಕ್‌ ಅನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಜತೆಗೆ ನಿಮ್ಮ ಅಗತ್ಯಗಳು, ನೆಟ್ವರ್ಕ್‌ನಲ್ಲಿ ಲಭ್ಯವಿರುವ ಸೌಲಭ್ಯಗಳ ಆಧಾರದ ಮೇಲೆ ನೀವು ಸರಿಯಾದ ನೆಟ್ವರ್ಕ್‌ ಅನ್ನು ಆಯ್ದುಕೊಳ್ಳಬಹುದು.

ಈ ಬ್ಯಾಂಕ್ ಕಾರ್ಡ್ ಹೆಚ್ಚಿನ ವಿತರಣೆ ಕಂಡಿದೆ:

ಈಗಾಗಲೇ ಭಾರತದಲ್ಲಿ ಅತಿ ಹೆಚ್ಚು ಕಾರ್ಡ್ ಗಳನ್ನು ವಿತರಿಸಿದ ಹೆಗ್ಗಳಿಕೆ HDFC ಬ್ಯಾಂಕ್ ಗೆ ಸಲ್ಲುತ್ತದೆ. ಹೌದು ಸುಮಾರು 2 ಕೋಟಿ ಕಾರ್ಡ್ ವಿತರಿಸಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಮುಂಚೂಣಿಯಲ್ಲಿದೆ. ಶೇ 70ರಷ್ಟು ಕಾರ್ಡ್‌ಗಳನ್ನು ಎಚ್‌ಡಿಎಫ್‌ಸಿ ಬ್ಯಾಂಕ್‌, ಎಸ್‌ಬಿಐ, ಐಸಿಐಸಿಐ ಬ್ಯಾಂಕ್ ಹಾಗೂ ಎಕ್ಸಿಸ್ ಬ್ಯಾಂಕ್ ವಿತರಿಸಿವೆ. ಎಸ್‌ಬಿಐ 1.84 ಕೋಟಿ ಕಾರ್ಡ್‌ಗಳನ್ನು ವಿತರಿಸಿದೆ.

advertisement

Leave A Reply

Your email address will not be published.